ಒಂದು ಕಾಲದಲ್ಲಿ ಭೂಗತಲೋಕದಲ್ಲಿ ಕುಖ್ಯಾತಿ ಗಳಿಸಿದ್ದ ಜಯರಾಜ್ ಬದುಕಿನ ಸುತ್ತ ಸುತ್ತುವ ‘ಜಾಂಟಿ ಸನ್ ಆಫ್ ಜಯರಾಜ್’ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಟ ವಿನೋದ್ ಪ್ರಭಾಕರ್ ಮತ್ತು ಶ್ರೀನಗರ ಕಿಟ್ಟಿ ಟೀಸರ್ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು. ಸುಗೂರುಕುಮಾರ್ ನಿರ್ಮಾಣದ ಚಿತ್ರಕ್ಕೆ ಆನಂದರಾಜ್ ಕತೆ ಬರೆದು ನಿರ್ದೇಶನ ಮಾಡಿದ್ದಾರೆ.

‘ಜಯರಾಜ್ ನಂತರದ ದಿನಗಳಲ್ಲಿನ ಹಣಕಾಸು ವ್ಯವಹಾರ, ದಂಧೆಗಳ ಕುರಿತು ಕೇಳಿದ್ದು, ನೋಡಿದ್ದು, ಓದಿದ್ದು ಎಲ್ಲವನ್ನೂ ಸೇರಿಸಿ ಚಿತ್ರಕಥೆ ಬರೆದಿದ್ದೇನೆ. ಜಯರಾಜ್ ಮಗನೇ ಈ ಚಿತ್ರದಲ್ಲಿ ಪಾತ್ರವಾಗಿ ಬರುತ್ತಾರೆ. ಜಯರಾಜ್ ಸಾವಿಗೆ ಕಾರಣವಾದ ಪಾತ್ರಗಳು ಬಂದು ಹೋಗುತ್ತವೆ. ತಾಯಿ ಸೆಂಟಿಮೆಂಟ್, ನವಿರಾದ ಪ್ರೀತಿ ಸನ್ನಿವೇಶಗಳು, ಗೆಳೆತನ ಎಲ್ಲವೂ ಕಥೆಯ ಭಾಗವಾಗಿದೆ. ಹಳೇ ಬೆಂಗಳೂರು ಹೇಗಿತ್ತೆಂದು ನೋಡಬೇಕಾದರೆ, ನಮ್ಮ ಸಿನಿಮಾ ನೋಡಿ’ ಎಂದು ಚಿತ್ರದ ಕುರಿತು ನಿರ್ದೇಶಕರು ಮಾಹಿತಿ ನೀಡಿದರು.

ನಾಯಕ ಅಜಿತ್ ಜಯರಾಜ್ಗೆ ನಿವಿಷ್ಕ ಪಾಟೀಲ್ ಜೋಡಿಯಾಗಿದ್ದಾರೆ. ರಾಜವರ್ಧನ್, ಶರತ್ ಲೋಹಿತಾಶ್ವ, ಪಟ್ರೋಲ್ಪ್ರಸನ್ನ, ಕಿಶನ್, ಸೋನುಪಾಟೀಲ್ ಮೊದಲಾದವರು ತಾರಾಗಣದಲ್ಲಿದ್ದಾರೆ.

ವಿಜೇತ್ ಮಂಜಯ್ಯ ಸಂಗೀತ, ಅರ್ಜುನ್ ಆಕೋಟ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.