ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5G ಬೇಡ ಎಂದಿದ್ದಕ್ಕೆ ₹20 ಲಕ್ಷ ದಂಡ: ಟ್ರೋಲ್‌ಗೆ ತುತ್ತಾದ ನಟಿ ಜೂಹಿ ಚಾವ್ಲಾ

ಸಾಮಾಜಿಕ ಜಾಲತಾಣದಲ್ಲಿ ಸಖತ್ ಟ್ರೋ‌ಲ್
ಅಕ್ಷರ ಗಾತ್ರ


ಬೆಂಗಳೂರು: ದೇಶದಲ್ಲಿ 5ಜಿ ನೆಟ್‌ವರ್ಕ್‌ನ್ನು ಜಾರಿಗೊಳಿಸಬಾರದು. ಈ ನಿಟ್ಟಿನಲ್ಲಿ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದುನಟಿ ಜೂಹಿ ಚಾವ್ಲಾ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಶುಕ್ರವಾರ ವಜಾಗೊಳಿಸಿ,₹20 ಲಕ್ಷ ದಂಡ ವಿಧಿಸಿ ಆದೇಶಿಸಿತ್ತು. ಈ ಸುದ್ದಿ ಟ್ವಿಟರ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜೂಹಿ ಚಾವ್ಲಾ ಅವರನ್ನು ಅನೇಕರು ಟ್ರೋಲ್ ಮಾಡಿ ಕಾಲೆಳದಿದ್ದಾರೆ.

ಅದರಲ್ಲೂ ಟ್ವಿಟರ್‌ನಲ್ಲಿ ಜೂಹಿ ಚಾವ್ಲಾ ಅವರನ್ನು ಬಗೆಬಗೆಯಾಗಿ ಟ್ರೋಲ್ ಮಾಡಲಾಗಿದ್ದು, ಒಂದಕ್ಕಿಂತ ಒಂದು ಮಿಮ್‌ಗಳು ನಗೆ ತರಿಸುವುದಲ್ಲದೇ ಏನೋ ಮಾಡಲು ಹೋಗಿ ಇನ್ನೇನೋ ಮಾಡಿದಂತಾಯಿತು ಎಂದಾಗಿದೆ ಜೂಹಿ ಪರಿಸ್ಥಿತಿ.

ಕ್ರಿಸ್ ಬಾಟಿಯಾ ಎನ್ನುವರು ಮಾಡಿರುವ ಟ್ವೀಟ್ ಸಕತ್ ವೈರಲ್ ಆಗಿದೆ. ‘5ಜಿ ತಂತ್ರಜ್ಞಾನವನ್ನು ಬಳಸದೇ 20 ಲಕ್ಷ ರೂಪಾಯಿ ಪಾವತಿಸುತ್ತಿರುವ ಮೊದಲ ಭಾರತೀಯ ಜೂಹಿ ಚಾವ್ಲಾ‘ ಎಂದು ಕಾಲೆಳದಿದ್ದಾರೆ.

ಭರತ್ ಚೌಹಾಣ್ ಎನ್ನುವರು, ‘5ಜಿ ವಿರುದ್ಧ ಸೆಟೆದು ನಿಂತಿರುವ ಜೂಹಿ ಪಕ್ಷಿರಾಜನ್ ಆಗಿ ಬದಲಾಗುತ್ತಾರೆ‘ ಎಂದು ಟ್ರೋಲ್ ಮಾಡಿದ್ದಾರೆ.

ಜೂಹಿ ಚಾವ್ಲಾ ಅವರ ಬಗೆಗಿನ ಮಿಮ್‌ಗಳು ಇಲ್ಲಿವೆ ನೋಡಿ...

ಪ್ರಕರಣ ಏನು?

ಜೂಹಿ ಚಾವ್ಲಾ ಹಾಗೂ ಸಾಮಾಜಿಕ ಕಾರ್ಯಕರ್ತರಾದ ವೀರೇಶ್ ಮಲಿಕ್ ಮತ್ತು ತೀನಾ ವಚಾನಿ ಸಲ್ಲಿಸಿದ್ದ ಅರ್ಜಿಯಲ್ಲಿ, 5 ಜಿ ತಂತ್ರಜ್ಞಾನವನ್ನು ಜಾರಿಗೆ ತರಲು ದೂರಸಂಪರ್ಕ ಉದ್ಯಮವು ಯೋಜನೆ ರೂಪಿಸಿದ್ದರೆ, ಯಾವುದೇ ವ್ಯಕ್ತಿ, ಪ್ರಾಣಿ, ಪಕ್ಷಿ, ಕೀಟ ಮತ್ತು ಭೂಮಿಯ ಮೇಲಿನ ಯಾವುದೇ ಸಸ್ಯಗಳು ಈ ವಿಕಿರಣಕ್ಕೆ ಒಡ್ಡಿಕೊಳ್ಳುವುದನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ. ದಿನದ 24 ಗಂಟೆಗಳು, ವರ್ಷದ 365 ದಿನಗಳು, ಆರ್‌ಎಫ್‌ ವಿಕಿರಣದ ಮಟ್ಟವು ಇಂದು ಅಸ್ತಿತ್ವದಲ್ಲಿರುವುದಕ್ಕಿಂತ 10x ರಿಂದ 100x ಪಟ್ಟು ಹೆಚ್ಚಾಗಿರುತ್ತದೆ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT