ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.9ಕ್ಕೆ ‘ಜಸ್ಟ್ ಪಾಸ್’ ತೆರೆಗೆ

Published 2 ಫೆಬ್ರುವರಿ 2024, 0:30 IST
Last Updated 2 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಈ ಹಿಂದೆ ‘ದೊಡ್ಡಹಟ್ಟಿ ಬೋರೇಗೌಡ’ ಚಿತ್ರ ನಿರ್ದೇಶಿಸಿದ್ದ ಕೆ.ಎಂ.ರಘು ನಿರ್ದೇಶಿಸಿರುವ ‘ಜಸ್ಟ್ ಪಾಸ್’ ಚಿತ್ರ ಫೆಬ್ರುವರಿ 9ರಂದು ತೆರೆ ಕಾಣುತ್ತಿದೆ. ಶ್ರೀ ಹಾಗೂ ಪ್ರಣತಿ ಜೋಡಿಯಾಗಿ ನಟಿಸಿರುವ ಈ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. 

‘ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ಟ್ರೇಲರ್ ಬಿಡುಗಡೆ ಮಾಡಬೇಕಿತ್ತು.‌ ಕಾರಣಾಂತರಗಳಿಂದ ಸಾಧ್ಯವಾಗಿಲ್ಲ. ಅವರ ಬೆಂಬಲ ನಮಗಿದೆ. ಕಾಲೇಜು ಹುಡುಗರ ಕಥೆ ಹೊಂದಿರುವ ಹಾಸ್ಯಮಯ ಚಿತ್ರ. ಚಿತ್ರ ಇಷ್ಟು ಅದ್ದೂರಿಯಾಗಿ ಮೂಡಿ ಬರಲು ನಮ್ಮ ನಿರ್ಮಾಪಕ ಕೆ.ವಿ.ಶಶಿಧರ್ ಅವರು ಕಾರಣ’ ಎಂದರು ನಿರ್ದೇಶಕರು. 

ಪ್ರಣತಿ

ಪ್ರಣತಿ

‘ಚಿತ್ರದಲ್ಲಿ ನಾನು ಜಸ್ಟ್‌ಪಾಸ್‌ ವಿದ್ಯಾರ್ಥಿನಿ. ಈ ಕಾಲೇಜು ಇರುವುದೇ ನಮ್ಮಂತಹ ವಿದ್ಯಾರ್ಥಿಗಳಿಗೆ’ ಎಂದು ತಮ್ಮ ಪಾತ್ರವನ್ನು ವಿವರಿಸಿದರು ಪ್ರಣತಿ.

ಹರ್ಷವರ್ಧನ್ ರಾಜ್ ಸಂಗೀತ, ಸುಜಯ್ ಕುಮಾರ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT