‘ತುಮ್ಹಾರಿ ಸುಲು’ನಲ್ಲಿ ಜ್ಯೋತಿಕಾ

7
jyothika new film

‘ತುಮ್ಹಾರಿ ಸುಲು’ನಲ್ಲಿ ಜ್ಯೋತಿಕಾ

Published:
Updated:
Deccan Herald

ವರ್ಷದ ಹಿಂದೆ ತೆರೆಕಂಡ ವಿದ್ಯಾಬಾಲನ್ ಮುಖ್ಯಪಾತ್ರದಲ್ಲಿದ್ದ ‘ತುಮ್ಹಾರಿ ಸುಲು’ ನೆನಪಿದೆಯೇ? ತುಸು ರೊಮ್ಯಾಂಟಿಕ್, ತೆಳು ಸ್ತ್ರೀವಾದ ಕಥಾ ಹಂದರವನ್ನೊಳಗೊಂಡಿದ್ದ ಈ ಸಿನಿಮಾ ಮಹಿಳಾ ಪ್ರೇಕ್ಷಕರಿಗೆ ಮುದ ನೀಡಿತ್ತು. ‘ತುಮ್ಹಾರಿ ಸುಲು’ ಈಗ ತಮಿಳಿಗೆ ರಿಮೇಕ್ ಆಗುತ್ತಿದ್ದು, ವಿದ್ಯಾಬಾಲನ್ ಮಾಡಿದ್ದ ಪಾತ್ರವನ್ನು ತಮಿಳಿನಲ್ಲಿ ನಟಿ ಜ್ಯೋತಿಕಾ ನಿರ್ವಹಿಸುತ್ತಿದ್ದಾರೆ.

ಮಹತ್ವಾಕಾಂಕ್ಷಿಯಾಗಿರುವ ಗೃಹಿಣಿಯೊಬ್ಬಳು ದಿಢೀರನೆ ರೇಡಿಯೊ ಜಾಕಿಯಾಗುವ ಕಥೆಯನ್ನೊಳಗೊಂಡಿರುವ ಈ ಸಿನಿಮಾಕ್ಕೆ ರಾಧಾಮೋಹನ್ ನಿರ್ದೇಶನವಿದೆ. ತಮಿಳಿನಲ್ಲಿ ’ಕಾಟ್ರಿಮೊಳಿ’ ಹೆಸರಿನಲ್ಲಿರುವ ಈ ಸಿನಿಮಾದ ಟ್ರೇಲರ್ ಈಗಾಗಲೇ ಬಿಡುಗಡೆಯಾಗಿದ್ದು, 80 ಸಾವಿರ ಜನ ವೀಕ್ಷಿಸಿದ್ದಾರೆ. ಜ್ಯೋತಿಕಾ ಪತಿಯಾಗಿ ವಿದಾರ್ಥ್ ನಟಿಸಿದ್ದು, ಮೊದಲ ನೋಟದಲ್ಲೇ ಟ್ರೇಲರ್ ಕುತೂಹಲ ಹುಟ್ಟಿಸುತ್ತದೆ.

ರೇಡಿಯೊದ ಸ್ಪರ್ಧೆಯೊಂದರಲ್ಲಿ ಪ್ರೆಷರ್ ಕುಕ್ಕರ್ ಅನ್ನು ಬಹುಮಾನವಾಗಿ ಪಡೆಯುವ ಮುಗ್ಧ ಗೃಹಿಣಿಯಾಗಿ ಕಾಣಿಸಿಕೊಂಡಿರುವ ಜ್ಯೋತಿಕಾ ಮುದ್ದಾಗಿ ಕಾಣಿಸುತ್ತಾರೆ. ತುಸು ತೂಕವನ್ನು ಇಳಿಸಿಕೊಂಡಿರುವ ಅವರ ಅಂದ ಟ್ರೇಲರ್ ಉದ್ದಕ್ಕೂ ಕಾಣಸಿಗುತ್ತದೆ. ಹಿಂದಿಯಲ್ಲಿ ಬಂದಿದ್ದ ‘ತುಮ್ಹಾರಿ ಸುಲು’ ಹಿಂದಿಯ ಪ್ರಾದೇಶಿಕತೆಗೆ ಅನುಗುಣವಾಗಿ ರೂಪುಗೊಂಡಿತ್ತು. ‘ಕಾಟ್ರಿಮೊಳಿ’ ಕೂಡಾ ತಮಿಳು ಪ್ರಾದೇಶಿಕತೆ ಪೂರಕವಾಗಿ ತಯಾರಾಗಿದೆ ಎಂಬುದು ಟ್ರೇಲರ್‌ನ ಮೊದಲ ನೋಟದಲ್ಲೇ ಕಾಣುತ್ತದೆ.

ಸ್ತ್ರೀವಾದ, ಗೃಹಿಣಿಯ ಮಹತ್ವಾಕಾಂಕ್ಷೆಯಂಥ ಸೂಕ್ಷ್ಮ ಸಂಗತಿಗಳನ್ನು ತುಸು ತಮಾಷೆಯಾಗಿ,  ತುಸು ವಿಷಾದಕರವಾಗಿಯೂ ಚಿತ್ರಿಸುವ ಈ ಸಿನಿಮಾ ಮಧ್ಯಮ ವರ್ಗದ ಗೃಹಿಣಿಯರಿಗೆ ಇಷ್ಟವಾಗುವಂತಿದೆ. ಚಿತ್ರ ಇದೇ 16ರಂದು ಬಿಡುಗಡೆ ಕಾಣಲಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !