ಶನಿವಾರ, ಡಿಸೆಂಬರ್ 3, 2022
21 °C

ಬಿಗ್‌ ಬಾಸ್ ಬಳಿಕ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡ ಅರವಿಂದ್–ದಿವ್ಯಾ ಉರುಡುಗ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 8ರಲ್ಲಿ ಜೋಡಿ ಹಕ್ಕಿ ಎಂದೇ ಹೆಸರಾಗಿದ್ದ ರನ್ನರ್ ಅಪ್ ಕೆ.ಪಿ. ಅರವಿಂದ್ ಮತ್ತು ದಿವ್ಯಾ ಉರುಡುಗ ಅವರು ಮತ್ತೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಬಿಗ್ ಬಾಸ್ ರಿಯಾಲಿಟಿ ಶೋ ಮುಗಿದ ಬಳಿಕ ಈ ಜೋಡಿ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ದಿವ್ಯಾ, ಆಗೊಮ್ಮ ಈಗೊಮ್ಮೆ ರೀಲ್ ವಿಡಿಯೊಗಳನ್ನು ಇನ್‌ಸ್ಟಾಗ್ರಾಮ್‌ಗೆ ಹಾಕುತ್ತಿದ್ದರು.

ಇದೀಗ, ಅರವಿಂದ್ ಕೆ ಪಿ ಅವರು  ದಿವ್ಯಾ ಉರುಡುಗ ಜೊತೆಗಿರುವ ಚಿತ್ರವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಪ್ರಶಸ್ತಿ ಕಾರ್ಯಕ್ರಮವೊಂದಕ್ಕೆ ತೆರಳುತ್ತಿರುವುದಾಗಿ ಅರವಿಂದ್ ಹೇಳಿಕೊಂಡಿದ್ದಾರೆ. ಅರವಿಂದ್ ಕಪ್ಪು ಸೂಟ್ ಧರಿಸಿದ್ದು, ದಿವ್ಯಾ ಉರುಡುಗ ವಿಶೇಷ ಡಿಸೈನರ್ ಉಡುಪಿನಲ್ಲಿ ಕಂಗೊಳಿಸುತ್ತಿದ್ದಾರೆ.

ಬಿಗ್ ಬಾಸ್ ಫಿನಾಲೆಗೆ ಬಂದಿದ್ದ ಬೈಕ್ ರೇಸರ್ ಕೆ.ಪಿ. ಅರವಿಂದ್ ಅವರು, ಭಾರೀ ಪೈಪೋಟಿ ಕೊಟ್ಟು ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿದ್ದರು. ಅವರಿಗೆ 43 ಲಕ್ಷಕ್ಕೂ ಅಧಿಕ ಮತ ಬಿದ್ದಿದ್ದವು.

   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು