ಬೆಂಗಳೂರು: ಬಾಲಿವುಡ್ನ ಜನಪ್ರಿಯ ನಟ ಕಬೀರ್ ಬೇಡಿ ‘ಹಂಟರ್‘ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿರುವ ಸುದ್ದಿಯ ಬೆನ್ನಲ್ಲೇ, ಮತ್ತೊಂದು ಕನ್ನಡ ಸಿನಿಮಾದಲ್ಲಿ ನಟಿಸುತ್ತಿರುವುದು ಖಚಿತವಾಗಿದೆ.

ಹಂಟರ್ ಚಿತ್ರದ ನಿರ್ಮಾಪಕ ತ್ರಿವಿಕ್ರಮ ಸಾಪಲ್ಯ ನಿರ್ಮಾಣದ, ಹೆಸರಿಡದ ಮತ್ತೊಂದು ಚಿತ್ರದಲ್ಲೂ ಕಬೀರ್ ಬೇಡಿ ಅಭಿನಯಿಸುತ್ತಿರುವುದು ಖಾತ್ರಿಯಾಗಿದೆ. ಅಕ್ಟೋಬರ್ 7 ರಿಂದ ಚಿತ್ರೀಕರಣ ಆರಂಭಗೊಳ್ಳಲಿದ್ದು, ಸುಮಾರು 800 ವರ್ಷಗಳ ಹಿಂದಿನ ಕಥೆಯಾಧಾರಿತ ಐತಿಹಾಸಿಕ ಸಿನಿಮಾವಿದು. ಬಂಗಾಳಿ ನಟ ಸೌಮಿಕ್ ಚಟರ್ಜಿ ಪ್ರಮುಖ ಪಾತ್ರದಲ್ಲಿದ್ದು, ಹಿರಿಯ ನಟಿಯರಾದ ಶ್ರುತಿ ಹಾಗೂ ಭವ್ಯ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ ಎಂದು ನಿರ್ಮಾಪಕರು ಹೇಳಿದ್ದಾರೆ.

ಜೇಮ್ಸ್ ಬಾಂಡ್, ಮೈಕಲ್ ಕೇನ್ ಮೊದಲಾದ ಹಾಲಿವುಡ್ ನಟರೊಂದಿಗೂ ತೆರೆ ಹಂಚಿಕೊಂಡಿರುವ ಕಬೀರ್ ಬೇಡಿ, ನಟ ಉಪೇಂದ್ರ ಅವರ ಸಂಬಂಧಿ ನಿರಂಜನ್– ಸೌಮ್ಯ ಮೆನನ್ ಜೊತೆಯಾಗಿ ನಟಿಸುತ್ತಿರುವ ಹಂಟರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.