ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಜ ಸಿನಿಮಾ ಆಡಿಷನ್‌: ವಿಲನ್‌ ಪಾತ್ರಕ್ಕಾಗಿ ನಿರ್ದೇಶಕ ಚಂದ್ರು ಹುಡುಕಾಟ

Last Updated 26 ಅಕ್ಟೋಬರ್ 2019, 6:34 IST
ಅಕ್ಷರ ಗಾತ್ರ

ಏಳು ಭಾಷೆಗಳಲ್ಲಿ ಸಿದ್ಧವಾಗುತ್ತಿರುವ ನಟ ಉಪೇಂದ್ರ ಅವರ ಕಬ್ಜ ಸಿನಿಮಾದ ಆಡಿಷನ್‌ ಶುರುವಾಗಿದ್ದು, ಪ್ಯಾನ್‌ ಇಂಡಿಯಾ ಸಿನಿಮಾದಲ್ಲಿ ಅಭಿನಯಿಸುವ ಹಂಬಲ ಇರುವವರಿಗೆ ಇದೊಂದುಸುವರ್ಣ ಅವಕಾಶವಾಗಿದೆ.

ನಿರ್ದೇಶಕ ಆರ್. ಚಂದ್ರು ಮತ್ತು ನಟ ಉಪೇಂದ್ರ ಜೋಡಿಯಲ್ಲಿ ನಿರ್ಮಾಣವಾಗಿತ್ತಿರುವ ಈ ಸಿನಿಮಾಗೆ ವಿಲನ್‌ ಪಾತ್ರಕ್ಕಾಗಿ ಚಿತ್ರತಂಡ ಹುಡುಕಾಡ ನಡೆಸುತ್ತಿದೆ.

20ರಿಂದ 40 ವರ್ಷ ವಯಸ್ಸಿನ ರಗಡ್‌ ಲುಕ್‌ ಇರುವ ಪುರುಷರು ಈ ಆಡಿಷನ್‌ನಲ್ಲಿ ಭಾಗವಹಿಸಬಹುದಾಗಿದೆ. ಆಸಕ್ತಿ ಇರುವವರು ಇತ್ತೀಚಿನ 3 ಭಾವಚಿತ್ರ ಹಾಗೂ ಸ್ವವಿವರವನ್ನು kabzaudition@gmail.com ಮೇಲ್‌ ಅಥವಾ 9663380507ಗೆ ವಾಟ್ಸ್‌ಆ್ಯಪ್‌ ಮಾಡಬಹುದು ಎಂದು ನಿರ್ದೇಶಕ ಆರ್‌.ಚಂದ್ರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ. ದಯವಿಟ್ಟು ಟಿಕ್ ಟಾಕ್ ವೀಡಿಯೋ ಕಳುಹಿಸಬೇಡಿ ಎಂದೂ ಅದರಲ್ಲಿ ಮನವಿ ಮಾಡಿದ್ದಾರೆ.

ಚಂದ್ರು ನಿರ್ದೇಶನದ, ಉಪೇಂದ್ರ ನಾಯಕನಾಗಿ ಅಭಿನಯಿಸಿರುವ ‘ಐ ಲವ್ ಯು’ ಚಿತ್ರದ ಶತದಿನೋತ್ಸವ ಆಚರಣೆಯ ಸಂದರ್ಭದಲ್ಲಿ ಕಬ್ಜ ಸಿನಿಮಾ ಘೋಷಣೆ ಹಾಗೂ ಅದರ ಶೀರ್ಷಿಕೆ ಅನಾವರಣ ಮಾಡಲಾಗಿದೆ.

ಶೀರ್ಷಿಕೆಯ ಪೋಸ್ಟರ್‌ನಲ್ಲಿ ಉಪೇಂದ್ರ ಅವರು ಲಾಂಗ್ ಹಿಡಿದುಕೊಂಡು, ನಡೆದುಬರುತ್ತಿರುವ ಚಿತ್ರ ಇದೆ. ಹಾಗಾಗಿ, ರೌಡಿಸಂ ಅಂಶ ಇರುವ ಚಿತ್ರ ಇದು ಎಂದು ಊಹಿಸಬಹುದು. ಕಥೆಯ ಎಳೆ ಏನು ಎಂಬುದನ್ನು ಚಂದ್ರು ಮತ್ತು ಉಪೇಂದ್ರ ಗುಟ್ಟಾಗಿಯೇ ಇರಿಸಿದ್ದಾರೆ.

ರೌಡಿಸಂ ಜೊತೆಯಲ್ಲೇ ಪ್ರೇಮಕಥೆಯೂ ಇರಬಹುದು ಎಂಬ ಸೂಚನೆ ಚಂದ್ರು ಆ ವೇಳೆ ನೀಡಿದ್ದರು. ಕುತೂಹಲದ ಅಂಶವೆಂದರೆ, ಉಪೇಂದ್ರ ನಿರ್ದೇಶನದ ‘ಓಂ’ ಚಿತ್ರದಲ್ಲಿ ಕೂಡ ರೌಡಿಸಂ ಮತ್ತು ಪ್ರೀತಿಯ ಕಥೆ ಇತ್ತು. ಅದರಲ್ಲಿ ಶಿವರಾಜ್ ಕುಮಾರ್ ಅವರು ನಾಯಕನಾಗಿ ಅಭಿನಯಿಸಿದ್ದರು.

‘ಕಬ್ಜ’ ಚಿತ್ರವು ಕನ್ನಡ, ತೆಲುಗು, ಮಲಯಾಳ, ತಮಿಳು, ಮರಾಠಿ, ಹಿಂದಿ ಮತ್ತು ಬಂಗಾಳಿ ಭಾಷೆಗಳಲ್ಲಿ ಸಿದ್ಧವಾಗಲಿದೆ. ಇಷ್ಟೇ ಅಲ್ಲ, ಚಿತ್ರವನ್ನು ಚೈನೀಸ್ ಭಾಷೆಯಲ್ಲಿ ಸಿದ್ಧಪಡಿಸುವ ಆಲೋಚನೆ ಚಂದ್ರು ಅವರಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT