ಬುಧವಾರ, ಫೆಬ್ರವರಿ 26, 2020
19 °C

‘ಕಬ್ಜ’ದಲ್ಲಿ ಉಪ್ಪಿ ಜೊತೆ ಜಗಪತಿಬಾಬು ಫೈಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಐ ಲವ್‌ ಯು’ ಚಿತ್ರದ ಬಳಿಕ ಆರ್‌. ಚಂದ್ರು ಮತ್ತು ‘ರಿಯಲ್‌ ಸ್ಟಾರ್’ ಉಪೇಂದ್ರ ಅವರ ಕಾಂಬಿನೇಷನ್‌ನಡಿ ನಿರ್ಮಾಣವಾಗುತ್ತಿರುವ ಚಿತ್ರ ‘ಕಬ್ಜ’. ಭೂಗತ ಲೋಕದ ಸುತ್ತ ಇದರ ಕಥೆ ಹೊಸೆಯಲಾಗಿದೆ. ಇದು ಪ್ಯಾನ್‌ ಇಂಡಿಯಾ ಚಿತ್ರ. ಪ್ರಸ್ತುತ ಈ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದ್ದು, ಹೈದರಾಬಾದ್‍ನಲ್ಲಿ ದ್ವಿತೀಯ ಹಂತದ ಶೂಟಿಂಗ್‌ಗೆ ಚಿತ್ರತಂಡ ಸಿದ್ಧತೆ ನಡೆಸಿದೆ.

ಚಿತ್ರದ ಶೂಟಿಂಗ್‌ಗಾಗಿ ಬೆಂಗಳೂರಿನ ಮಿನರ್ವ ಮಿಲ್‍ನಲ್ಲಿ ಕಲಾ ನಿರ್ದೇಶಕ ಶಿವಕುಮಾರ್ ಅವರು ಎಂಟು ಅದ್ದೂರಿ ಸೆಟ್‍ಗಳನ್ನು ನಿರ್ಮಿಸಿದ್ದರು. ಇಲ್ಲಿಯೇ ಚಿತ್ರತಂಡ 22 ದಿನಗಳ ಕಾಲ ಹಗಲು–ರಾತ್ರಿ ಚಿತ್ರೀಕರಣ ನಡೆಸಿದೆ. ಹೈದರಾಬಾದ್‍ನಲ್ಲಿಯೂ ಐದು ವಿಶೇಷ ಸೆಟ್‍ಗಳನ್ನು ನಿರ್ಮಿಸಲು ಚಿತ್ರತಂಡ ಮುಂದಾಗಿದೆ. ಅಲ್ಲಿ ನಡೆಯುವ ಶೂಟಿಂಗ್‌ನಲ್ಲಿ ಉಪೇಂದ್ರ ಅವರೊಟ್ಟಿಗೆ ಟಾಲಿವುಡ್‌ ಖ್ಯಾತ ಖಳನಟ ಜಗಪತಿಬಾಬು ಹಾಗೂ ಬಾಲಿವುಡ್‍ನ ಕಲಾವಿದರು ಪಾಲ್ಗೊಳ್ಳಲಿದ್ದಾರಂತೆ.

ಎಂ.ಟಿ.ಬಿ. ನಾಗರಾಜ್ ಅರ್ಪಿಸುವ ಶ್ರೀಸಿದ್ದೇಶ್ವರ ಎಂಟರ್‌ಪ್ರೈಸಸ್‌ ಲಾಂಛನದಡಿ ಆರ್. ಚಂದ್ರು ಅವರೇ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ರವಿ ಬಸ್ರೂರ್ ಸಂಗೀತ ಸಂಯೋಜಿಸಿದ್ದಾರೆ. ಎ.ಜೆ. ಶೆಟ್ಟಿ ಅವರ ಛಾಯಾಗ್ರಹಣವಿದೆ. ರಾಜು ಸುಂದರಂ, ಗಣೇಶ್ ಆಚಾರ್ಯ, ಶೇಖರ್ ಅವರ ನೃತ್ಯ ನಿರ್ದೇಶನವಿದೆ. ರವಿವರ್ಮ, ವಿಜಯ್, ವಿಕ್ರಂ ಮೋರ್ ಸಾಹಸ ಸಂಯೋಜಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು