ಬುಧವಾರ, ಮೇ 25, 2022
30 °C

ಮೊದಲ ಬಾರಿಗೆ ಮಗುವಿನ ಫೋಟೊ ಹಂಚಿಕೊಂಡ ನಟಿ ಕಾಜಲ್ ಅಗರವಾಲ್

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟಿ ಕಾಜಲ್ ಅಗರವಾಲ್ ಅವರು ಕಳೆದ ಏಪ್ರಿಲ್ 19 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಫೋಟೊಗಳನ್ನು ಹಂಚಿಕೊಂಡಿರಲಿಲ್ಲ.

ಇದೀಗ ಕಾಜಲ್ ಅಮ್ಮಂದಿರ ದಿನದ ಪ್ರಯುಕ್ತ ತಮ್ಮ ಮುದ್ದಾದ ಮಗು ನೀಲ್ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಸಂಪೂರ್ಣವಾಗಿ ಮುಖ ತೋರಿಸಿಲ್ಲ.

ಫೋಟೊದ ಜೊತೆ ಭಾವನಾತ್ಮಕ ಸಂದೇಶ ಹಾಕಿಕೊಂಡಿರುವ ಕಾಜಲ್, ಮಗು ಪಡೆದ ನಾನು ತಾಯ್ತನದ ಖುಷಿಯನ್ನು ಬಣ್ಣಿಸಲು ಆಗುವುದಿಲ್ಲ. ಮಗು ನೀನೇ ನನಗೆ ಎಲ್ಲ. ನಾನೇ ನಿನಗೆ ಎಲ್ಲ ಎಂದು ಹೇಳಿಕೊಂಡಿದ್ದಾರೆ.

ಸದ್ಯ ಸಿನಿಮಾಗಳಿಗೆ ಕೊಂಚ ವಿರಾಮ ನೀಡಿರುವ ಕಾಜಲ್, ಎಸ್‌. ಶಂಕರ್‌ ನಿರ್ದೇಶನದ ‘ಇಂಡಿಯನ್‌ 2’ ಸಿನಿಮಾದಲ್ಲಿ ನಟ ಕಮಲ ಹಾಸನ್‌ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು