ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಕಾಲಾಂತಕ' ಕನ್ನಡ ಸಿನಿಮಾ

Last Updated 16 ಜನವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
"ಶ್ರೀಧರ್, ಯಶವಂತ್ ಶೆಟ್ಟಿ, ಡಾ.ಅಂಬರೀಶ್"

‘ಕಾಲಾಂತಕ’ ಶಿವನ ಮತ್ತೊಂದು ಹೆಸರು. ತನ್ನ ಪರಮ ಭಕ್ತ ಮಾರ್ಕಂಡೇಯನ ಜೀವ ಉಳಿಸಲು ಯಮನ ವಿರುದ್ಧ ಹೋರಾಟಕ್ಕಿಳಿದಾಗ ಶಿವನಿಗೆ ಈ ಹೆಸರು ಬಂದಿತು ಎಂಬುದನ್ನು ಪುರಾಣದ ಕಥೆಯಲ್ಲಿ ಓದಿದ್ದೇವೆ. ಈಗ ಇದೇ ಹೆಸರು ಇಟ್ಟುಕೊಂಡೇ ಅಂಬರೀಷ್ ಎಂ. ಸಿನಿಮಾ ನಿರ್ದೇಶಿಸಿದ್ದಾರೆ. ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್‌ ಧರಿಸಿದ ಖುಷಿಯಲ್ಲಿದ್ದಾರೆ.

‘ಕಾಲಾಂತಕ’ ಚಿತ್ರದ ಶೂಟಿಂಗ್‌ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿಗೆ ಹಾಜರಾಗಿತ್ತು.

ಅಬಚೂರು ಎಂಬ ಕಾಲ್ಪನಿಕ ಗ್ರಾಮದಲ್ಲಿ ಕಥೆ ಸಾಗಲಿದೆಯಂತೆ. ಅಲ್ಲೊಬ್ಬ ಮಾದಕದ್ರವ್ಯ ಕಳ್ಳ ಸಾಗಣೆದಾರ ಇರುತ್ತಾನೆ. ಊರಿನ ಮೇಲೆ ಆತನದು ಸಂಪೂರ್ಣ ಹಿಡಿತ. ಅಲ್ಲಿನ ಪೈಶಾಚಿಕ ಕೃತ್ಯಗಳನ್ನು ಬರವಣಿಗೆಯ ರೂಪಕ್ಕಿಳಿಸಲು ಬರಹಗಾರ್ತಿಯೊಬ್ಬಳು ಮುಂದಾಗುತ್ತಾಳೆ. ಆ ಗ್ರಾಮದ ಘಟನೆಗಳ ಬಗ್ಗೆ ಬರೆಯಲು ಶುರು ಮಾಡುತ್ತಾಳೆ. ಆಗ ಇಬ್ಬರ ನಡುವೆ ಘರ್ಷಣೆ ಶುರುವಾಗುತ್ತದೆ. ಇದೇ ಚಿತ್ರದ ಕಥೆಯ ಸಾರಾಂಶ. ಪೆನ್ನು, ಬರಹ, ಸಿಗರೇಟು, ಗಾಂಜಾ ಕಥೆಯಲ್ಲಿ ಪ್ರಧಾನವಾಗಿ ಬರುತ್ತವೆ. ಹಾಗಾಗಿಯೇ, ಪೋಸ್ಟರ್‌ನಲ್ಲಿ ಇದನ್ನೇ ತೋರಿಸಲಾಗಿದೆ.

ಯಾವುದೇ ಸೆಟ್‌ ಹಾಕದೆ ಚಿಕ್ಕಮಗಳೂರಿನ ನೈಜ ಸ್ಥಳಗಳಲ್ಲಿ ಶೂಟಿಂಗ್‌ ನಡೆಸಲಾಗಿದೆಯಂತೆ. ಜಯಂತ ಕಾಯ್ಕಿಣಿ ಮತ್ತು ಕಿನ್ನಲ್ ರಾಜ್ ಸಾಹಿತ್ಯ ರಚಿಸಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ. ಎಸ್. ಹಾಲೇಶ್ ಅವರ ಛಾಯಾಗ್ರಹಣವಿದೆ. ಸಂಕಲನ ಹರೀಶ್‍ ಕೊಮ್ಮೆ ಅವರದು. ಮಾಸ್‍ ಮಾದ ಸಾಹಸ ನಿರ್ದೇಶಿಸಿದ್ದಾರೆ. ಶಾಂತಕುಮಾರ್‌ ಹಾಗೂ ಹರಿನಾಥ್ ಎಲ್. ಆರ್ಥಿಕ ಇಂಧನ ಒದಗಿಸಿದ್ದಾರೆ.

ಮಾದಕ ದ್ರವ್ಯ ಸಾಗಾಣಿಕೆದಾರನಾಗಿ ಯಶ್‍ವಂತ್‍ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಅರ್ಚನಾ ಜೋಯಿಸ್ ಅವರದು ಬರಹಗಾರ್ತಿಯ ಪಾತ್ರ. ‘ಶನಿ’ ಧಾರಾವಾಹಿಯಲ್ಲಿ ಇಂದ್ರನಾಗಿ ಕಾಣಿಸಿಕೊಂಡಿದ್ದ ಕಾರ್ತಿಕ್‍ ಸಾಮಗ, ಕೆ.ಎಸ್. ಶ್ರೀಧರ್‌, ಸುಷ್ಮಿತಾ ಜೋಷಿ, ಧರ್ಮೇಂದ್ರ ಅರಸ್ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT