ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಕಿ ಟ್ರೇಲರ್: ಪ್ರಭಾಸ್‌ ಅಬ್ಬರಕ್ಕೆ ಅಭಿಮಾನಿಗಳು ಫಿದಾ

Published 11 ಜೂನ್ 2024, 7:03 IST
Last Updated 11 ಜೂನ್ 2024, 7:03 IST
ಅಕ್ಷರ ಗಾತ್ರ

ಬೆಂಗಳೂರು: ತೆಲುಗಿನ ಮಾಸ್‌ ನಟ ಪ್ರಭಾಸ್‌ ಅಭಿನಯದ 'ಕಲ್ಕಿ 2898 ಎಡಿ' ಸಿನಿಮಾದ (Kalki 2898 AD) ಟ್ರೇಲರ್ ಬಿಡುಗಡೆಯಾಗಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ.

ಈ ಟ್ರೇಲರ್ ನೋಡಿ ಪ್ರಭಾಸ್‌ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ನೆಟ್ಟಿಗರಿಂದ ಟ್ರೇಲರ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಇದರಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಮೊದಲಾದವರು ಕಾಣಿಸಿಕೊಂಡಿದ್ದಾರೆ.

ಈ ಭೂಮಿಯ ಮೊದಲ ನಗರ ಹಾಗೂ ಕೊನೆಯ ನಗರ ಕಾಶಿ. ಭೂಮಿನ ಪೂರ್ತಿ ನಾಶ ಮಾಡಿದರೆ ಎಲ್ಲರೂ ಅಲ್ಲೇ ಇರುತ್ತಾರೆ, ಈ ನಗರದ ಮೇಲೆ ನೀರು ಇರುತ್ತದೆ ಎನ್ನುವ ಧ್ವನಿ ಟ್ರೇಲರ್‌ನಲ್ಲಿ ಕೇಳಿ ಬರುತ್ತದೆ.

ಸಿನಿಮಾದ ಗ್ರಾಫಿಕ್ಸ್ ಗಮನ ಸೆಳೆದಿದ್ದು, ಪ್ರಭಾಸ್ ಅವರು ಭೈರವನಾಗಿ ಖಡಕ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರಕ್ಕೆ ಅಶ್ವಿನ್ ದತ್​ ಅವರು ಬಂಡವಾಳ ಹೂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT