ಸೋಮವಾರ, ಏಪ್ರಿಲ್ 6, 2020
19 °C

ರೇಖಾ ತುಟಿ ಚುಂಬನ: ಕಮಲ ಹಾಸನ್‌ ಕ್ಷಮೆಯಾಚನೆಗೆ ನೆಟ್ಟಿಗರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ‘ಪುನ್ನಗೈ ಮನ್ನನ್’ ಸಿನಿಮಾದಲ್ಲಿ ಒಪ್ಪಿಗೆ ಇಲ್ಲದೆ ರೇಖಾಳ ತುಟಿ ಚುಂಬಿಸಿದ್ದಕ್ಕೆ ನಟ ಕಮಲ ಹಾಸನ್‌, ರೇಖಾ ಅವರಲ್ಲಿ ಕ್ಷಮೆಯಾಚಿಸಬೇಕು ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಆಗ್ರಹಿಸಿದ್ದಾರೆ. 

ಕೆ. ಬಾಲಚಂದರ್‌ ನಿರ್ದೇಶಿಸಿದ ತಮಿಳು ಚಿತ್ರ ‘ಪುನ್ನಗೈಮನ್ನನ್’ 1986ರಲ್ಲಿ ತೆರೆಕಂಡಿತ್ತು. ಇದರಲ್ಲಿ ಕಮಲಹಾಸನ್‌ ಮತ್ತು ರೇಖಾ ನಟಿಸಿದ್ದರು. ಈ ಚಿತ್ರದಲ್ಲೊಂದು ದೃಶ್ಯವಿದೆ. ಸಮಾಜದ ನಿಂದನೆಗೆ ತುತ್ತಾಗುವ ಪ್ರೇಮಿಗಳು ಬೇರ್ಪಡುವ ದೃಶ್ಯವದು. ಬೇರ್ಪಡುವುದಕ್ಕೂ ಮೊದಲು ಇಬ್ಬರೂ ಪರಸ್ಪರ ತುಟಿ ಚುಂಬಿಸಿಕೊಂಡು ಜಲಪಾತಕ್ಕೆ ಹಾರುತ್ತಾರೆ!

‘ಈ ಚುಂಬನಕ್ಕೆ ನನ್ನ ಒಪ್ಪಿಗೆಯೇ ಇರಲಿಲ್ಲ’ ಎಂದು ನಾಯಕಿ ರೇಖಾ ಅವರ ಬಹಿರಂಗ ಹೇಳಿಕೆಯೂ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗೆ ಮುನ್ನುಡಿ ಬರೆದಿದ್ದು ನೆಟ್ಟಿಗರು ರೇಖಾ ಅವರ ಬಳಿ ಕಮಲಹಾಸನ್‌ ಕ್ಷಮೆಯಾಚಿಸಬೇಕು ಎಂದು ಆಗ್ರಹ ಮೊಳಗಿಸಿದ್ದಾರೆ.

ಕಮಲಹಾಸನ್ ನನ್ನ ತುಟಿಗಳನ್ನು ಚುಂಬಿಸುವ ಬಗ್ಗೆ ನನಗೆ ಎಳ್ಳಷ್ಟೂ ಗೊತ್ತಿರಲಿಲ್ಲ. ಸ್ಕ್ರಿಪ್ಟ್‌ನಲ್ಲಿಯೂ ಆ ಬಗ್ಗೆ ಮಾಹಿತಿ ಇರಲಿಲ್ಲ. ಕಮಲಹಾಸನ್‌ ಏಕಾಏಕಿ ನನ್ನ ತುಟಿ ಚುಂಬಿಸಿದರು. ಬಳಿಕ ನಾನು ಸಹ ನಿರ್ದೇಶಕರ ಬಳಿ ಇದರ ಬಗ್ಗೆ ಕೇಳಿದೆ. ರಾಜನೊಬ್ಬ ಸಣ್ಣಮಗುವಿನಂತೆ ಮುತ್ತಿಟ್ಟಿದ್ದಾನೆ ಎಂದು ಅಂದುಕೊಳ್ಳಿ ಎಂದು ಉತ್ತರಿಸಿದರು. ಜನರು ಈ ದೃಶ್ಯದ ಬಗ್ಗೆ ನನಗೆ ಹಲವಾರು ಬಾರಿ ಪ್ರಶ್ನೆ ಕೇಳಿದ್ದಾರೆ. ಅವರ ಪ್ರಶ್ನೆಗೆ ಉತ್ತರಿಸಲು ಆಗುತ್ತಿರಲಿಲ್ಲ. ಆಗ ನನಗೂ ಬೇಸರವಾಗುತ್ತಿತ್ತು’ ಎಂದು ಹೇಳಿದ್ದಾರೆ ರೇಖಾ.

ಕಮಲ ಹಾಸನ್‌ ಅವರು ರೇಖಾ ಅವರಲ್ಲಿ ಕ್ಷಮೆಯಾಚಿಸಬೇಕು ಎಂದು ನೆಟ್ಟಿಗರು ಹೇಳಿದ್ದಾರೆ. ಅವರ ಆಗ್ರಹದ ಟ್ವೀಟ್‌ಗಳು ಇಲ್ಲಿವೆ...

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು