ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲ್ ಹಾಸನ್ ಅಭಿನಯದ 'ಇಂಡಿಯನ್ 2' ಸಿನಿಮಾ ಜೂನ್‌ನಲ್ಲಿ ತೆರೆಗೆ

Published 7 ಏಪ್ರಿಲ್ 2024, 11:17 IST
Last Updated 7 ಏಪ್ರಿಲ್ 2024, 11:17 IST
ಅಕ್ಷರ ಗಾತ್ರ

ನವದೆಹಲಿ: ತಮಿಳಿನ ಖ್ಯಾತ ನಿರ್ದೇಶಕ ಎಸ್.ಶಂಕರ್ ನಿರ್ದೇಶಿಸಿದ, ಕಮಲ್ ಹಾಸನ್ ಅಭಿನಯದ ಬಹು ನಿರೀಕ್ಷಿತ 'ಇಂಡಿಯನ್ 2' ಚಿತ್ರ ಜೂನ್‌ನಲ್ಲಿ ತೆರೆಗೆ ಬರಲಿದೆ.

ಲೈಕಾ ಪ್ರೊಡಕ್ಷನ್ಸ್ ತನ್ನ ಅಧಿಕೃತ ಖಾತೆ 'ಎಕ್ಸ್'ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. 'ಸೇನಾಪತಿಯ ಪುನರಾಗಮನಕ್ಕೆ ಸಿದ್ಧರಾಗಿ. 'ಇಂಡಿಯನ್ 2' ಚಿತ್ರ ಜೂನ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿರುಗಾಳಿ ಎಬ್ಬಿಸಲು ಸಿದ್ಧವಾಗಿದೆ' ಎಂದು ಬರೆದುಕೊಂಡಿದೆ.

'ಇಂಡಿಯನ್ 2' ಚಿತ್ರ 1996ರಲ್ಲಿ ಮೂಡಿಬಂದ ‘ಇಂಡಿಯನ್’ನ ಮುಂದುವರಿದ ಭಾಗ. ಕಮಲ್ ಹಾಸನ್ ಅವರು ಸೇನಾಪತಿ ಪಾತ್ರದಲ್ಲಿ ಮಿಂಚಿದ್ದರು.

ಚಿತ್ರದಲ್ಲಿ ಕಾಜಲ್ ಅಗರ್‌ವಾಲ್, ಸಿದ್ಧಾರ್ಥ್, ರಾಕುಲ್ ಪ್ರೀತ್ ಸಿಂಗ್, ಎಸ್‌.ಜೆ ಸೂರ್ಯ, ವಿವೇಕ್, ಬಾಬಿ ಸಿಂಹ, ನೆಡುಮುಡಿ ವೇಣು, ಪಿ ಸಮುದ್ರಕನಿ, ಪ್ರಿಯಾ ಭವಾನಿ ಶಂಕರ್, ಮನೋಬಾಲಾ, ಗುಲ್ಶನ್ ಗ್ರೋವರ್, ಪಿಯೂಷ್ ಮಿಶ್ರಾ ಮತ್ತು ಬ್ರಹ್ಮಾನಂದಂ ಬಣ್ಣ ಹಚ್ಚಿದ್ದಾರೆ.

ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ, ರವಿವರ್ಮನ್ ಛಾಯಾಗ್ರಹಣವಿದೆ. ಲೈಕಾ ಪ್ರೊಡಕ್ಷನ್ಸ್ ಮತ್ತು ರೆಡ್ ಜೈಂಟ್ ಮೂವೀಸ್ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT