ಶುಕ್ರವಾರ, ಜುಲೈ 1, 2022
27 °C

ಕಮಲ್‌ ಹಾಸನ್‌, ವಿಜಯ್‌ ಸೇತುಪತಿ ನಟನೆಯ ’ವಿಕ್ರಮ್‘ ಸಿನಿಮಾ ಜೂನ್‌ 3ಕ್ಕೆ ತೆರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತೀಯ ಸಿನಿಮಾ ಕ್ಷೇತ್ರದಲ್ಲಿ ವಿಭಿನ್ನ ಅಭಿನಯದ ಮೂಲಕ ಜನಪ್ರಿಯರಾಗಿರುವ ನಟ ಕಮಲ್‌ ಹಾಸನ್‌ ಅವರ 'ವಿಕ್ರಮ್' ಸಿನಿಮಾ ಜೂನ್‌ 3ರಂದು ಬಿಡುಗಡೆಯಾಗಲಿದೆ.

ಜೂನ್‌ 3ರಂದು 'ವಿಕ್ರಮ್' ಸಿನಿಮಾ ಬಿಡುಗಡೆಯಾಗಲಿದೆ ಎಂದು ನಟ ಕಮಲ್ ಹಾಸನ್‌ ಟ್ವೀಟ್‌ ಮಾಡಿದ್ದಾರೆ. ಹಾಗೇ ಚಿತ್ರತಂಡ ಕೂಡ ಭಾನುವಾರ ಸಿನಿಮಾ ಮೇಕಿಂಗ್‌ ವಿಡಿಯೊ ಬಿಡುಗಡೆ ಮಾಡಿ ಸಿನಿಮಾ ತೆರೆಗೆ ಬರುವ ದಿನಾಂಕವನ್ನು ಖಚಿತಪಡಿಸಿದೆ. 

ಕನ್ನಡ ಸೇರಿದಂತೆ ಪಂಚ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ತಮಿಳಿನ ಮತ್ತೊಬ್ಬ ಸ್ಟಾರ್‌ ನಟ ವಿಜಯ್‌ ಸೇತುಪತಿ, ಮಲಯಾಳಂ ನಟ ಫಹಾದ್‌ ಫಾಸಿಲ್‌ ಕೂಡ ನಟಿಸಿದ್ದಾರೆ.  

ಇದನ್ನೂ ಓದಿ: ಮೇ 6ಕ್ಕೆ ಶರಣ್‌ ನಟನೆಯ ‘ಅವತಾರ ಪುರುಷ’ ಬಿಡುಗಡೆ

ಈಗಾಗಲೇ ಚಿತ್ರದ ಪೋಸ್ಟರ್‌ಗಳು ಮತ್ತು ಟೀಸರ್‌ ನೋಡಿರುವ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ವಿಕ್ರಮ್' ಸಿನಿಮಾವನ್ನು ಲೋಕೇಶ್‌ ಕನಕರಾಜು ನಿರ್ದೇಶನ ಮಾಡಿದ್ದಾರೆ. 

ಇದನ್ನೂ ಓದಿ: ಹೀಗಿದೆ ನೋಡಿ ಉಪ್ಪಿ ನಿರ್ದೇಶನದ ಹೊಸ ಸಿನಿಮಾ ಶೀರ್ಷಿಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು