ಲಂಡನ್: ಎಡಗೈ ಸ್ಪಿನ್ನರ್ ಲಿಯಾಮ್ ಡಾಸನ್ ಅವರು ಎಂಟು ವರ್ಷಗಳ ಬಳಿಕ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಮರಳಿದ್ದಾರೆ.

ಲಾರ್ಡ್ಸ್ನಲ್ಲಿ ನಡೆದ ಭಾರತದ ಎದುರಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಬೆರಳು ಮುರಿದುಕೊಂಡಿದ್ದ ಶೋಯಬ್ ಬಶೀರ್ ಅವರ ಸ್ಥಾನಕ್ಕೆ ಡಾಸನ್ ಅವರನ್ನು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಆಯ್ಕೆ ಮಾಡಿದೆ.

35 ವರ್ಷ ವಯಸ್ಸಿನ ಡಾಸನ್, 2017ರಲ್ಲಿ ಕೊನೆಯಬಾರಿ ಟೆಸ್ಟ್ ಪಂದ್ಯದಲ್ಲಿ ಆಡಿದ್ದರು. ದಕ್ಷಿಣ ಆಫ್ರಿಕಾ ಎದುರಿನ ಮೂರು ಪಂದ್ಯಗಳ ಸರಣಿಯಲ್ಲಿ ಏಳು ವಿಕೆಟ್ ಪಡೆದುಕೊಂಡಿದ್ದರು.

ಅವರು, ಪ್ರಥಮದರ್ಜೆ ಕ್ರಿಕೆಟ್ನಲ್ಲಿ 212 ಪಂದ್ಯಗಳಲ್ಲಿ 371 ವಿಕೆಟ್ಗಳೊಂದಿಗೆ 10 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ.

‘ಕೌಂಟಿ ಕ್ರಿಕೆಟ್ ಚಾಂಪಿಯನ್ಷಿಪ್ನಲ್ಲಿ ಹ್ಯಾಂಪ್ಶೈರ್ ಪರ ಅಸಾಧಾರಣ ಪ್ರದರ್ಶನ ನೀಡಿರುವ ಡಾಸನ್ ಅವರು ಇಂಗ್ಲೆಂಡ್ ತಂಡಕ್ಕೆ ಮರಳುವ ಅರ್ಹತೆಯನ್ನು ಹೊಂದಿದ್ದಾರೆ’ ಎಂದು ಆಯ್ಕೆಗಾರ ಲ್ಯೂಕ್ ರೈಟ್ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.