ಸೋಮವಾರ, 14 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ | ಹಣಕಾಸಿನ ವಿಚಾರದಲ್ಲಿ ಪರಿಶ್ರಮಕ್ಕೆ ತಕ್ಕ ಫಲ ದೊರೆಯುವುದು
Published 14 ಜುಲೈ 2025, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಪರಂಪರೆಯಲ್ಲಿ ಬಂದಿರುವ ಆಸ್ತಿಯನ್ನು ಮಾರಾಟ ಮಾಡುವ ಯೋಚನೆಗಳಿದ್ದಲ್ಲಿ ಅದನ್ನು ಕೈ ಬಿಡುವುದು ಸೂಕ್ತ. ದುರದೃಷ್ಟವಶಾತ್ ಆರಂಭವಾಗಿದ್ದ ಹೊಸ ಕೆಲಸವು ನಿಲ್ಲುವಂಥ ಸೂಚನೆಗಳು ಕಾಣಬಹುದು.
ವೃಷಭ
ವೃದ್ಧರು ಹಾಗೂ ಅಶಕ್ತರನ್ನು ಗೌರವದಿಂದ ಕಾಣುವ ಸ್ವಭಾವವು ಇತರರನ್ನು ಆಕರ್ಷಿಸುತ್ತದೆ. ಮಾಡುವ ಕೆಲಸವು ಉತ್ತಮವಾಗಿ, ಸರಾಗವಾಗಿ, ಲಾಭದಾಯಕವಾಗಿ ಮುಗಿಯುತ್ತದೆ.
ಮಿಥುನ
ಹೊಸ ವ್ಯಕ್ತಿಯೊಂದಿಗೆ ವ್ಯವಹಾರ ಮಾತುಕತೆ ನಡೆಸುವುದು ಸರಿಯಲ್ಲ. ಸಹೋದ್ಯೋಗಿಗಳಿಗೆ ಕಿರಿಕಿರಿ ಉಂಟಾಗಬಹುದು. ಮಕ್ಕಳ ಅಭಿವೃದ್ಧಿ ವಿಚಾರವಾಗಿ ಶುಭಸುದ್ದಿಯನ್ನು ಕೇಳುವಿರಿ.
ಕರ್ಕಾಟಕ
ಉತ್ತಮ ಪ್ರಯತ್ನದಿಂದಾಗಿ ಬಯಸಿದ ಕಡೆ ಕೆಲಸ ಸಿಗುವ ಸಾಧ್ಯತೆ ಇದೆ. ಹೊಸ ವೃತ್ತಿ ಪರಿಸರಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಿರುವವರಿಗೆ ಮಾರ್ಗದರ್ಶನ ನೀಡಿ ಸಮಾಧಾನವಾಗುತ್ತದೆ.
ಸಿಂಹ
ನ್ಯಾಯಾಲಯಕ್ಕೆ ಸಂಬಂಧಿಸಿದ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ವ್ಯಕ್ತಿಯನ್ನು ಆರಿಸಿಕೊಳ್ಳಲು ಗಡಿಬಿಡಿ ಬೇಡ, ಸರಿಯಾಗಿ ವಿಚಾರಿಸಿ ತೀರ್ಮಾನಿಸಿ. ವಾಸಕ್ಕೆ ಯೋಗ್ಯವಾದ ಭೂ ಖರೀದಿಯ ಯೋಗವಿದೆ.
ಕನ್ಯಾ
ಎಲ್ಲರ ಜೊತೆಯಲ್ಲೂ ಬೆರೆಯುವುದರಿಂದ ಹೆಚ್ಚಿನ ಕಾರ್ಯಗಳಲ್ಲಿ ಅನುಕೂಲ ಇರುವುದು. ಸಂಶೋಧನೆ ನಡೆಸುವವರು ಒಂದು ವಿಚಾರವಾಗಿ ಆಳವಾದ ಜ್ಞಾನವನ್ನು ಸಂಪಾದಿಸಿಕೊಳ್ಳಲು ಪ್ರಯತ್ನಿಸಿ.
ತುಲಾ
ವ್ಯವಹಾರದಲ್ಲಿ ಎಲ್ಲವೂ ಸಕಾರಾತ್ಮಕವಾಗಿ ಇರುವುದರಿಂದ ನೆಮ್ಮದಿಯ ದಿನ. ಸಾಗರ, ಜಲಾಶಯ, ಜಲಪಾತ ಸಮೀಪದ ಪ್ರವಾಸಗಳನ್ನು ನಿಶ್ಚಯಿಸಿದ್ದರೆ ತಾತ್ಕಾಲಿಕವಾಗಿ ಅದನ್ನು ಮುಂದೂಡಿ.
ವೃಶ್ಚಿಕ
ಚರ್ಮ ಸಂಬಂಧಿ ಕಾಯಿಲೆಗಳನ್ನು ಪರಿಹರಿಸಿಕೊಳ್ಳಲು ಹೊಸ ಔಷಧಿಗಳ ಪ್ರಯೋಗ ಬೇಡ. ಸಾಂಸಾರಿಕ ವಿಷಯದಲ್ಲಿ ಗುರು-ಹಿರಿಯರ ಮಾತು ಮೀರದಿರುವುದು ಲೇಸು. ವಿಫುಲ ಅವಕಾಶಗಳು ದೊರೆಯಲಿವೆ.
ಧನು
ಕೆಲಸದ ಫಲಿತಾಂಶವು ಸರಿಯಾಗಿದ್ದರೂ ವಿಧಾನವನ್ನು ಬದಲಿಕೊಳ್ಳಬೇಕೆಂಬ ಅನಿವಾರ್ಯತೆ ಕಾಡುವುದು. ಗುಣಮಟ್ಟದ ಹಣ್ಣು ಮಾರಾಟಗಾರರಿಗೆ ಉತ್ತಮ ವ್ಯಾಪಾರ ಹಾಗೂ ಲಾಭ ಇರುವುದು.
ಮಕರ
ಸಣ್ಣ ಕೈಗಾರಿಕೆಯನ್ನು ನಡೆಸುತ್ತಿರುವವರು ನೂತನ ಘಟಕಗಳನ್ನು ಆರಂಭಿಸುವ ಬಗ್ಗೆ ಯೋಚಿಸಬಹುದು. ಪ್ರವೃತ್ತಿಯ ಕಾರ್ಯಗಳಿಂದ ವೃತ್ತಿಯ ಕಾರ್ಯದ ವೇಗ, ಗುಣಮಟ್ಟ ಕಡಿಮೆಯಾಗುವ ಸಾಧ್ಯತೆಯಿದೆ.
ಕುಂಭ
ಹೊಸದೊಂದು ಆದಾಯದ ದಾರಿ ಸಿಗಲಿದೆ. ಧೈರ್ಯಂ ಸರ್ವತ್ರ ಸಾಧನಂ ಎನ್ನುವ ವಾಕ್ಯದಂತೆ ಹೆದರದೆ ಒಪ್ಪಿಕೊಳ್ಳಿ. ಕೆಲಸವನ್ನು ಶ್ರದ್ಧೆಯಿಂದ, ಸಮಯಕ್ಕೆ ಸರಿಯಾಗಿ ಮಾಡಿದರೆ ಜಯವಾಗುವುದು.
ಮೀನ
ಕಾರ್ಯ ನಿಮಿತ್ತವಾಗಿ ಕುಟುಂಬದಲ್ಲಿ ಭಿನ್ನಾಭಿಪ್ರಾಯ ತೋರಿ ಬಂದರೂ ತಾಳ್ಮೆ, ಸಮಾಧಾನ ಇರಲಿ. ಮಕ್ಕಳ ವರ್ತನೆಯು ಆತಂಕವನ್ನು ತರಲಿದೆ. ಹಣಕಾಸಿನ ವಿಚಾರದಲ್ಲಿ ಪರಿಶ್ರಮಕ್ಕೆ ತಕ್ಕ ಫಲ ದೊರೆಯುವುದು.
ADVERTISEMENT
ADVERTISEMENT