ಬೆಂಗಳೂರು: ‘ನಮ್ಮ ರಾಜ್ಯದ ಜೂನಿಯರ್ ಹಾಕಿ ವಿಭಾಗದಲ್ಲಿ ಉತ್ತಮ ಆಟಗಾರರು ಇದ್ದಾರೆ. ಇನ್ನೂ ಕೆಲವೇ ವರ್ಷಗಳಲ್ಲಿ ಭಾರತ ತಂಡದಲ್ಲಿ ನಮ್ಮ ರಾಜ್ಯದ ಕನಿಷ್ಠ ಮೂವರು ಆಟಗಾರರು ಆಡುವುದು ಖಚಿತ’–

ಭಾರತ ಹಾಕಿ ತಂಡದ ಮಾಜಿ ಆಟಗಾರ ಮತ್ತು ಹಾಕಿ ಕರ್ನಾಟಕ ಮಹಾಪ್ರಧಾನ ಕಾರ್ಯದರ್ಶಿ ಎ.ಬಿ. ಸುಬ್ಬಯ್ಯ ಅವರ ವಿಶ್ವಾಸದ ಮಾತುಗಳಿವು. ಶುಕ್ರವಾರ ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆಒಎ)ಯಲ್ಲಿ ನಡೆದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಅವರು ಪಾಲ್ಗೊಂಡಿದ್ದರು. ಸಮಾರಂಭದ ನಂತರ ಅವರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ಭಾರತ ತಂಡವನ್ನು ಕರ್ನಾಟಕದಿಂದ ಪ್ರತಿನಿಧಿಸುವವರ ಸಂಖ್ಯೆ ಕಡಿಮೆಯಾಗಿರುವುದರ ಕಾರಣವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಕೊಡಗು ಭಾಗದಲ್ಲಿ ಸೌಲಭ್ಯಗಳಿವೆ. ಆದರೆ ನುರಿತ ತರಬೇತುದಾರರ ಕೊರತೆ ಇದೆ. ಬೇಸಿಗೆ ಶಿಬಿರ ಮತ್ತು ಕ್ಯಾಂಪ್ಗಳಿದ್ದಾಗ ಹಲವು ಮಕ್ಕಳು ಭಾಗವಹಿಸುತ್ತಾರೆ. ಆದರೆ ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವುದು ಅಗತ್ಯ. ಅದಕ್ಕಾಗಿ ಉತ್ತಮ ಕೋಚ್ಗಳು ಬೇಕು. ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ’ ಎಂದರು.

‘ಉತ್ತರ ಕರ್ನಾಟಕ ಭಾಗದಿಂದಲೂ ಉತ್ತಮ ಆಟಗಾರರು ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ. ಈಚೆಗೆ ನಡೆದ ರಾಷ್ಟ್ರೀಯ ಗೇಮ್ಸ್ನಲ್ಲಿ ಕೂಡ ಆಡಿದ್ದರು. ಅವರಲ್ಲಿ ಕೆಲವು ಆಟಗಾರರು ಸಾರ್ವಜನಿಕ ಸಂಸ್ಥೆಗಳಲ್ಲಿ ಉದ್ಯೋಗ ಕೂಡ ಪಡೆದಿದ್ದಾರೆ’ ಎಂದರು.

‘ರಾಜ್ಯದಲ್ಲಿರುವ ಮೂಲಸೌಲಭ್ಯಗಳ ಬಗ್ಗೆ ನಮಗೆ ಅತೃಪ್ತಿ ಇದೆ. ಅದರಲ್ಲೂ ಬೆಂಗಳೂರಿನಲ್ಲಿರುವುದು ಒಂದೇ ಮೈದಾನ. ಅಲ್ಲಿ ಯಾವಾಗಲೂ ದಟ್ಟಣೆ ಹೆಚ್ದಾಗಿರುತ್ತದೆ. ನಗರದಲ್ಲಿ ದೂರ ಅಂತರ ಪ್ರಯಾಣಿಸಿ ಕ್ರೀಡಾಂಗಣಕ್ಕೆ ಬರುವುದು ಕೂಡ ಕಷ್ಟ. ಒಡಿಶಾ, ಮಧ್ಯಪ್ರದೇಶ, ಪಂಜಾಬ್ ರಾಜ್ಯಗಳಲ್ಲಿರುವಂತಹ ಸೌಲಭ್ಯಗಳು ಇಲ್ಲಿ ಇಲ್ಲ. ಅಲ್ಲಿಯ ಸ್ಪೇಷಲ್ ಏರಿಯಾ ಗೇಮ್ಸ್ನಂತಹ ಯೋಜನೆಗಳೂ ಇಲ್ಲಿ ಬರಬೇಕು. ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶದಲ್ಲಿರುವ ಪ್ರತಿಭಾವಂತ ಆಟಗಾರರಿಗೆ ಅವಕಾಶ ನೀಡಬೇಕು. ಅವರಿಗೆ ತರಬೇತಿ ಮತ್ತಿತರ ಸೌಲಭ್ಯಗಳನ್ನು ಕೊಡಬೇಕು. ಪ್ರತಿಯೊಂದು ಜಿಲ್ಲಾ ಕೇಂದ್ರಕ್ಕೂ ಸುಸಜ್ಜಿತ ಕ್ರೀಡಾಂಗಣ ಇರಬೇಕು. ಹಾಕಿ ಸೇರಿದಂತೆ ಎಲ್ಲ ಕ್ರೀಡೆಗಳಿಗೂ ಅನುಕೂಲವಾಗಬೇಕು’ ಎಂದು ಏಷ್ಯನ್ ಗೇಮ್ಸ್ ಪದಕವಿಜೇತರೂ ಆಗಿರುವ ಸುಬ್ಬಯ್ಯ ಹೇಳಿದರು.

‘ಈ ಹಿಂದೆ ಎಚ್ಎಎಲ್, ಬಿಇಎಲ್, ಬೆಮೆಲ್, ಸಿಐಎಲ್ ಮತ್ತು ಬ್ಯಾಂಕ್ ತಂಡಗಳು ಇದ್ದವು. ಆದ್ದರಿಂದ ಹೆಚ್ಚು ಟೂರ್ನಿಗಳು ನಡೆಯುತ್ತಿದ್ದವು. ಉದ್ಯೋಗಾವಕಾಶಗಳೂ ಹೆಚ್ಚಿದ್ದವು. ಆ ಸಂಸ್ಥೆಗಳಲ್ಲಿ ಈಗ ತಂಡಗಳಿಲ್ಲ. ಕೇಂದ್ರದ ಕೆಲವು ಸಂಸ್ಥೆಗಳು ಮತ್ತು ರಾಜ್ಯದ ಕೆಲವು ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ ಉದ್ಯೋಗಾವಕಾಶಗಳಿವೆ. ಆದರೆ ಅದು ಸಾಲದು. ಇನ್ನಷ್ಟು ಅವಕಾಶಗಳು ಬೇಕು’ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.