ಸೋಮವಾರ, ಜನವರಿ 27, 2020
26 °C
Kamal Hasan

ಕಮಲ್‌ ಸಾಹಸಕ್ಕೆ ಡ್ಯೂಪ್‌ ಸಹಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಹುಭಾಷಾ ನಟ ಕಮಲ್‌ ಹಾಸನ್‌ ಅಭಿನಯದ ಬಹುನಿರೀಕ್ಷಿತ ‘ಇಂಡಿಯನ್‌–2’ ಚಿತ್ರ ಈಗಾಗ್ಲೇ ಸೆಟ್ಟೇರಿದೆ. ನಿರ್ದೇಶಕ ಶಂಕರ್‌ ಆ್ಯಕ್ಷನ್‌ ಕಟ್‌ ಹೇಳಿರುವ ಚಿತ್ರದಲ್ಲಿ ಕಮಲ್‌ ಹಾಸನ್‌ ಸಾಹಸ ದೃಶ್ಯಗಳಿಗೆ ಡ್ಯೂಪ್‌ (ಸಾಹಸ ಕಲಾವಿದರು) ಬಳಸಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

ವರದಿಯೊಂದರ ಪ್ರಕಾರ, ಆ್ಯಕ್ಷನ್‌ ಕೋರಿಯೋಗ್ರಾಫರ್‌ ಮತ್ತು ಸ್ಟಂಟ್‌ ಕೋ–ಆರ್ಡಿನೇಟರ್‌ ಪೀಟರ್‌ ಹೇನ್ಸ್‌ ಅವರ ಸಹಾಯಕ ಸಿಬ್ಬಂದಿಯನ್ನು ಈ ಕೆಲಸಕ್ಕಾಗಿ ಆಯ್ಕೆ ಮಾಡಲಾಗಿದೆ ಎಂಬ ಸುದ್ದಿ ಇದೆ. ಸಾಮಾನ್ಯವಾಗಿ ಕಮಲ್‌ ತಮ್ಮ ಸ್ಟಂಟ್‌, ಆ್ಯಕ್ಷನ್‌ಗಳನ್ನು ಖುದ್ದು ಮಾಡುತ್ತಾರೆ. ಡ್ಯೂಪ್‌ ಬಳಸಲ್ಲ. ಆದರೆ ಇತ್ತೀಚೆಗೆ ಕಾಲಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಕಾರಣ ಬಹುಶಃ ಈ ನಿರ್ಧಾರ ತೆಗೆದುಕೊಂಡಿರಬಹುದು ಎನ್ನಲಾಗಿದೆ. 

ಗ್ವಾಲಿಯರ್‌ ಮತ್ತು ಭೋಪಾಲ್‌ನಲ್ಲಿ ನಡೆದ ‘ಇಂಡಿಯನ್‌–2’ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದೆ. ಉಳಿದ ಭಾಗದ ಶೂಟಿಂಗ್‌ ತೈವಾನ್‌ನಲ್ಲಿ ನಡೆಯಲಿದೆ. ಈ ಸಿನಿಮಾದಲ್ಲಿ ಸಿದ್ದಾರ್ಥ್‌, ಕಾಜಲ್‌ ಅಗರ್‌ವಾಲ್‌, ರಾಕುಲ್‌ ಪ್ರೀತ್‌, ಪ್ರಿಯಾ ಭವಾನಿ ಶಂಕರ್‌ ಮತ್ತು ಬಾಬಿ ಸಿಂಹ (ಜಯಸಿಂಹ) ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅನಿರುದ್ಧ ರವಿಚಂದ್ರನ್‌ ಸಂಗೀತ ನಿರ್ದೇಶನವಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು