ಸೋಮವಾರ, ಜನವರಿ 24, 2022
29 °C

2022: ಪ್ರೀತಿಯ ಶತ್ರುಗಳ ಕರುಣೆಗಾಗಿ ಪ್ರಾರ್ಥಿಸಿದ ನಟಿ ಕಂಗನಾ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಹೊಸ ವರ್ಷದ ಮೊದಲ ದಿನದಂದು ತಿರುಪತಿಯ ಬಾಲಾಜಿ ದೇವಸ್ಥಾನಕ್ಕೆ ಬಾಲಿವುಡ್‌ ನಟಿ ಕಂಗನಾ ಭೇಟಿ ನೀಡಿದ್ದಾರೆ. 

ಈ ಕುರಿತ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿರುವ ಅವರು ಪ್ರೀತಿಯ ಶತ್ರುಗಳ ಕರುಣೆಗಾಗಿ ದೇವರಲ್ಲಿ ಪ್ರಾರ್ಥಿಸಿದ್ದಾರೆ.  

‘ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ತಿರುಪತಿ ಬಾಲಾಜಿಯ ಆಶೀರ್ವಾದದೊಂದಿಗೆ ಈ ವರ್ಷವನ್ನು ಪ್ರಾರಂಭಿಸುತ್ತಿದ್ದೇನೆ. ಇದು ಸ್ಮರಣೀಯ ಎಂಬುದಾಗಿ ನಾನು ಭಾವಿಸುತ್ತೇನೆ’ ಎಂದು ತಿಳಿಸಿದ್ದಾರೆ.

ಇದೇ ವೇಳೆ ರಾಹು ಕೇತು ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೊವನ್ನು ಹಂಚಿಕೊಂಡಿರುವ ಅವರು, ‘ಜಗತ್ತಿನಲ್ಲಿ ಒಂದೇ ರಾಹು ಕೇತು ದೇವಾಲಯವಿದೆ. ಇದು ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ತುಂಬಾ ಹತ್ತಿರದಲ್ಲಿದೆ. ಇಲ್ಲಿ  ಪೂಜೆಯನ್ನು ಸಲ್ಲಿಸಲಾಯಿತು. ನನ್ನ ಪ್ರೀತಿಯ ಶತ್ರುಗಳ ಕರುಣೆಯನ್ನು ಹೊಂದಲು ನಾನು ಅಲ್ಲಿಗೆ ಹೋಗಿದ್ದೆ. ಈ ವರ್ಷದಲ್ಲಿ ನನ್ನ ಮೇಲೆ ಕಡಿಮೆ ಪೊಲೀಸ್ ದೂರುಗಳು ಹಾಗೂ ಎಫ್‌ಐಆರ್‌ಗಳು ದಾಖಲಾಗಲಿ. ಹೆಚ್ಚಿನ ಪ್ರೇಮ ಪತ್ರಗಳು ಬರಲಿ. ಜೈ ರಾಹು ಕೇತು’ ಎಂದು ಬರೆದುಕೊಂಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು