ಶುಕ್ರವಾರ, ಮಾರ್ಚ್ 31, 2023
33 °C

‘ಜೀಬ್ರಾ’ ಏರಿದ ಡಾಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಡಾಲಿ ಧನಂಜಯ್ ಮತ್ತು ತೆಲುಗಿನ ಸತ್ಯದೇವ್ ಜೊತೆಯಾಗಿ ನಟಿಸುತ್ತಿರುವ, ಪ್ಯಾನ್ ಇಂಡಿಯಾ ಚಿತ್ರಕ್ಕೆ ‘ಜೀಬ್ರಾ’ ಎಂದು ಹೆಸರಿಡಲಾಗಿದೆ. 

ಓಲ್ಡ್‌ಟೌನ್‌ ಪಿಕ್ಚರ್ಸ್ ಎಲ್ಎಲ್ಪಿ ಮತ್ತು ಪದ್ಮಜಾ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ನಿರ್ಮಿಸುತ್ತಿರುವ ಈ ಬಹುತಾರಾಗಣದ ಚಿತ್ರವನ್ನು ‘ಪೆಂಗ್ವಿನ್’ ಖ್ಯಾತಿಯ ಈಶ್ವರ್ ಕಾರ್ತಿಕ್ ನಿರ್ದೇಶನ ಮಾಡುತ್ತಿದ್ದಾರೆ. ಈಗಾಗಲೇ 50 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಮುಂದೆ ಹೈದರಾಬಾದ್, ಕೊಲ್ಕತ್ತಾ, ಮುಂಬೈಯಲ್ಲಿ ಚಿತ್ರೀಕರಣ ನಡೆಯಲಿದೆ.

ಈ ಚಿತ್ರಕ್ಕೆ ರವಿ ಬಸ್ರೂರು ಸಂಗೀತವಿದೆ. ‘ಬಸ್ರೂರು ಅವರ ಹಿನ್ನೆಲೆ ಸಂಗೀತವು ಈ ಚಿತ್ರದ ಹೈಲೈಟ್. ಅವರು ಚಿತ್ರದ ಆತ್ಮವನ್ನು ತಮ್ಮ ಸಂಗೀತದ ಮೂಲಕ ಅದ್ಭುತವಾಗಿ ಎತ್ತಿಹಿಡಿಯಲಿದ್ದಾರೆ’ ಎಂದಿದ್ದಾರೆ ನಿರ್ಮಾಪಕರಾದ ಬಾಲಸುಂದರಂ ಮತ್ತು ಪದ್ಮಜಾ ರೆಡ್ಡಿ.

ಈ ಚಿತ್ರದಲ್ಲಿ ಬಾಹುಬಲಿಯ ‘ಕಟ್ಟಪ್ಪ’ ಖ್ಯಾತಿಯ ಸತ್ಯರಾಜ್, ಸುನಿಲ್ ನಟಿಸುತ್ತಿದ್ದಾರೆ. ಸತ್ಯ ಪೊನ್ಮಾರ್ ಅವರ ಛಾಯಾಗ್ರಹಣ ಮತ್ತು ಅನಿಲ್ ಕ್ರಿಶ್ ಅವರ ಸಂಕಲನ ಈ ಚಿತ್ರಕ್ಕಿದೆ. ಈಶ್ವರ್‌ ಕಾರ್ತಿಕ್‌ ಈ ಚಿತ್ರದ ನಿರ್ದೇಶಕರು. ಬಾಲಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ಅನಿಲ್‌ ಕ್ರಿಷ್‌ ಅವರ ಸಂಕಲನ, ಸತ್ಯ ಪೊನ್ಮಾರ್ ಛಾಯಾಗ್ರಹಣವಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು