ಗುರುವಾರ , ಜನವರಿ 20, 2022
15 °C

ರಾಜ್ ಕುಟುಂಬ ಸದಸ್ಯರಿಂದ ಅಪ್ಪುಗೆ ಅಂತಿಮ ವಿದಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೂವಿನ ಪಲ್ಲಕ್ಕಿಯಲ್ಲಿ ಪುನೀತ್‌

ಬೆಂಗಳೂರು: ಶಿವರಾಜ್‌ಕುಮಾರ್, ಗೀತಾ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಅವರ ಪತ್ನಿ ಮಂಗಳಾ, ಮಗ ಯುವ ರಾಜ್‌ಕುಮಾರ್, ಶ್ರೀಮುರಳಿ, ವಿಜಯ ರಾಘವೇಂದ್ರ ಸೇರಿದಂತೆ ರಾಜ್ ಕುಟುಂಬದ ಸದಸ್ಯರು ಪ್ರೀತಿಯ ಅಪ್ಪುಗೆ ಅಂತಿಮ ನಮನ ಸಲ್ಲಿಸಿದರು.

ಪಲ್ಲಕ್ಕಿಯಲ್ಲಿ ತಣ್ಣಗೆ ಮಲಗಿದ್ದ ಪುನೀತ್‌ಗೆ ಪೂಜೆ ಮಾಡುವ ವೇಳೆ ಮಡುಗಟ್ಟಿದ ದುಃಖ ಉಮ್ಮಳಿಸಿ ಬರುತ್ತಿತ್ತು.

ಪುನೀತ್ ಪತ್ನಿ ಅಶ್ವಿನಿ ಪುತ್ರಿಯರಿಬ್ಬರ ಕೈಗಳನ್ನು ಬಿಗಿಯಾಗಿ ಹಿಡಿದು ಧೈರ್ಯ ತುಂಬುತ್ತಿದ್ದರು.

LIVE| ಪುನೀತ್‌ ಅಂತ್ಯಸಂಸ್ಕಾರ: ಕಂಠೀರವ ಸ್ಟುಡಿಯೊದಲ್ಲಿ ಅಪ್ಪುಗೆ ಅಂತಿಮ ನಮನ

ನಟರಾದ ಉಪೇಂದ್ರ, ರವಿಚಂದ್ರನ್, ಯಶ್, ಜಗ್ಗೇಶ್, ಡಾಲಿ ಧನಂಜಯ, ದುನಿಯಾ ವಿಜಯ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವರಾದ ಆರ್.ಅಶೋಕ, ಆರಗ ಜ್ಞಾನೇಂದ್ರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು