ಸಚಿನ್ ಚೆಲುವರಾಯಸ್ವಾಮಿ, ಸಂಗೀತಾ ಭಟ್ ಮುಖ್ಯಭೂಮಿಕೆಯಲ್ಲಿರುವ ‘ಕಮಲ್ ಶ್ರೀದೇವಿ’ ಚಿತ್ರದ ಟೈಟಲ್ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ವಿ.ಎ ಸುನೀಲ್ ನಿರ್ದೇಶನ ಚಿತ್ರಕ್ಕೆ ನಟ ರಾಜವರ್ಧನ್ ಕ್ರಿಯೇಟಿವ್ ಹೆಡ್ ಆಗಿದ್ದಾರೆ.

‘ಸಿನಿಮಾ ಆರಂಭದಲ್ಲಿ ನಡೆಯುವ ಒಂದು ಅಪರಾಧವನ್ನು ಯಾರು ಮಾಡಿದ್ದಾರೆ ಎಂಬುದರ ಹಿಂದೆ ಇದರ ಕಥೆ ಸುತ್ತುತ್ತದೆ. ನಾನು ಕಮಲ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಕನ್ನಡ ಸಿನಿಮಾ ನಿರ್ದೇಶಕ ಹಾಗೂ ಕನ್ನಡಾಭಿಮಾನಿಯಾಗಿರುವ ಕಮಲ್ ಒಂದು ಸನ್ನಿವೇಶದಲ್ಲಿ ಹಲವರನ್ನು ಭೇಟಿಯಾಗುತ್ತಾರೆ. ಯಾಕೆ ಭೇಟಿಯಾಗುತ್ತಾರೆ? ಈ ಸಿನಿಮಾದಲ್ಲಿ ನಡೆಯುವ ಒಂದು ಕ್ರೈಂಗೂ ಅವರಿಗೂ ಏನು ಸಂಬಂಧ ಎಂಬುದೇ ಚಿತ್ರದ ಒನ್ಲೈನ್ ಸ್ಟೋರಿ’ ಎಂದರು ಸಚಿನ್.

‘ಮಮ್ಮಿ’ ಖ್ಯಾತಿಯ ಲೋಹಿತ್ ಈ ಕಥೆಯ ಎಳೆ ಕೊಟ್ಟರೆ, ‘ಗೊಂಬೆಗಳ ಲವ್’ ಚಿತ್ರದ ಸಂತೋಷ್ ‘ಕಮಲ್ ಶ್ರೀದೇವಿ’ ಎಂಬ ಶೀರ್ಷಿಕೆ ಕೊಟ್ಟರು. ಎರಡು ವರ್ಷಗಳ ಹಿಂದೆ ಪ್ರಾರಂಭಗೊಂಡ ಈ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಬಾಕಿಯಿದೆ. ಇದೇ ವರ್ಷ ತೆರೆಗೆ ಬರಲಿದೆ’ ಎಂದು ರಾಜವರ್ಧನ್ ತಿಳಿಸಿದರು.

ಸ್ವರ್ಣಾಂಬಿಕ ಪಿಕ್ಚರ್ಸ್ ಬ್ಯಾನರ್ನಲ್ಲಿ ಶ್ರೀಮತಿ ಬಿ.ಕೆ ಧನಲಕ್ಷ್ಮೀ ಬಂಡವಾಳ ಹೂಡಿದ್ದಾರೆ. ಕೀರ್ತನ್ ಸಂಗೀತ, ನಾಗೇಶ್ ವಿ ಆಚಾರ್ಯ ಛಾಯಾಚಿತ್ರಗ್ರಹಣ, ಜ್ಞಾನೇಶ್ ಬಿ ಮಠದ್ ಸಂಕಲನವಿದೆ. ಕಿಶೋರ್, ರಮೇಶ್ ಇಂದಿರಾ ಮತ್ತಿತರರು ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.