‘ಮೆಜೆಸ್ಟಿಕ್-2’ ಚಿತ್ರದ ‘ನಾಯಕ ನಾನೇ’ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಈ ಚಿತ್ರಕ್ಕೆ ರಾಮು ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ನಟ ಭರತ್ ಕುಮಾರ್ಗೆ ಸಂಹಿತಾ ವಿನ್ಯಾ ಜೋಡಿಯಾಗಿದ್ದಾರೆ.

‘ಕಳೆದ 20 ವರ್ಷಗಳಿಂದ ಚಿತ್ರರಂಗದಲ್ಲಿರುವೆ. ಸಿನಿಮಾ ಮಾಡಲು ನಿರ್ಮಾಪಕರನ್ನು ಒಪ್ಪಿಸುವುದು ಸವಾಲಿನ ಕೆಲಸ. ಈ ಚಿತ್ರದ ನಿರ್ಮಾಪಕ ಆನಂದಪ್ಪ ದೊಡ್ಡ ಬಜೆಟ್ ನೀಡಿದ್ದಾರೆ. ಮೆಜೆಸ್ಟಿಕ್, ರಾಮೋಹಳ್ಳಿ, ಎಚ್.ಎಂ.ಟಿ ಸೇರಿದಂತೆ ಬೆಂಗಳೂರು ಸುತ್ತಮುತ್ತ ಹಾಗೂ ಚಿತ್ರದುರ್ಗದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರೀಕರಣ ಪೂರ್ಣಗೊಂಡಿದ್ದು ಶೀಘ್ರದಲ್ಲಿ ಬಿಡುಗಡೆ ದಿನಾಂಕ ಘೋಷಿಸುತ್ತೇವೆ’ ಎಂದರು ನಿರ್ದೇಶಕರು.

‘ಇದು ಮೆಜೆಸ್ಟಿಕ್ನಲ್ಲಿ ಹುಟ್ಟಿ, ಬೆಳೆದ ಹುಡುಗನ ಕಥೆ. ನನ್ನ ಪಾತ್ರಕ್ಕೆ ಎರಡು ಶೇಡ್ಸ್ ಇದೆ. ಮೆಜೆಸ್ಟಿಕ್ ಅಂಡರ್ಪಾಸ್, ಬಸ್ ನಿಲ್ದಾಣಗಳಲ್ಲಿಯೂ ಚಿತ್ರೀಕರಣ ನಡೆಸಿದ್ದೇವೆ. ‘ಮೆಜೆಸ್ಟಿಕ್’ ಚಿತ್ರದಂತೆಯೇ ಇದು ಕೂಡ ಮಾಸ್ ಕಥೆ ಹೊಂದಿರುವ ಚಿತ್ರ’ ಎಂದರು ನಾಯಕ ಭರತ್.

ಶ್ರುತಿ ನಾಯಕನ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಗೀತೆಗೆ ವಿನು ಮನಸು ಸಂಗೀತ ನಿರ್ದೇಶನವಿದೆ. ಏಳು ಗಾಯಕರು ಧ್ವನಿಯಾಗಿದ್ದಾರೆ. ವೀನಸ್ ಮೂರ್ತಿ ಛಾಯಾಚಿತ್ರಗ್ರಹಣವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.