ಶನಿವಾರ, ಜನವರಿ 28, 2023
24 °C

ರಾಮಾಚಾರಿ 2.0 ಶೀರ್ಷಿಕೆ ಹಾಡು ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಪನೋರಮಿಕ್‌ ಸ್ಟುಡಿಯೋ, ಮೇಘನಾ ಕ್ರಿಯೇಷನ್ಸ್‌ ಬ್ಯಾನರ್‌ ಅಡಿ ನಟ ತೇಜಸ್‌ ನಿರ್ಮಾಣ ಮತ್ತು ಅಭಿನಯದ ‘ರಾಮಾಚಾರಿ 2.0’ ಚಿತ್ರದ ಶೀರ್ಷಿಕೆ ಹಾಡು ಭಾನುವಾರ ಬಿಡುಗಡೆಯಾಗಿದೆ. ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಪ್ರಚಾರ ಭರದಿಂದ ಸಾಗಿದೆ ಎಂದು ತೇಜಸ್‌ ತಿಳಿಸಿದ್ದಾರೆ.

ಕೌಸ್ತುಭ ಹಾಗೂ ಚಂದನಾ ಈ ಚಿತ್ರದ ನಾಯಕಿಯರು. ಶೀರ್ಷಿಕೆ ಹಾಡಿನಲ್ಲಿ ವಿಷ್ಣುವರ್ಧನ್‌ ಅವರ ಅಭಿನಯಕ್ಕೂ ಗೌರವ ಸಲ್ಲಿಸಲಾಗಿದೆ.

ವಿಷ್ಣುವರ್ಧನ್‌ ಅಭಿನಯದ ‘ನಾಗರಹಾವು’ ಚಿತ್ರದ ರಾಮಾಚಾರಿ, ರವಿಚಂದ್ರನ್‌ ಅಭಿನಯದ ‘ರಾಮಾಚಾರಿ’ ಇಲ್ಲಿ ಹೊಸ ಅವತಾರದಲ್ಲಿ 2.0 ಆವೃತ್ತಿ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಕೊನೆಗೂ ರಾಮಾಚಾರಿಗೆ ಮಾರ್ಗರೆಟ್‌ ಸಿಗುತ್ತಾಳೋ ಅಥವಾ ಜೊತೆಯಲ್ಲಿ ನಂದಿನಿ ಇರುತ್ತಾಳೋ ಎಂಬ ಕುತೂಹಲವನ್ನು ಈ ಚಿತ್ರ ಇನ್ನೂ ಕಾದಿರಿಸಿದೆ. 

ರಾಘವೇಂದ್ರ ರಾಜ್‌ಕುಮಾರ್‌, ಸ್ವಾತಿ, ಸ್ಪರ್ಶರೇಖಾ, ವಿಜಯ್‌ ಚೆಂಡೂರ್‌, ಪ್ರಭು ಸೂರ್ಯ, ಶಶಿಧರ್‌ ತಾರಾಗಣದಲ್ಲಿದ್ದಾರೆ.  

ಚಿತ್ರ ಶೀಘ್ರ ತೆರೆ ಕಾಣಲಿದೆ ಎಂದಿರುವ ತೇಜಸ್‌ ಬಿಡುಗಡೆ ದಿನಾಂಕದ ಗುಟ್ಟು ಬಿಟ್ಟುಕೊಟ್ಟಿಲ್ಲ. ಈ ನಡುವೆ ತೇಜಸ್‌ ಅವರ ಹೊಸ ಚಿತ್ರ ‘ಗಾಡ್‌’ ಸೆಟ್ಟೇರಿದ್ದು ಶೀಘ್ರ ಚಿತ್ರೀಕರಣ ಆರಂಭವಾಗಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು