ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ ಮದುವೆಯೂ, ಬಂಟಿ ಲವ್‌ಸ್ಟೋರಿಯೂ...ಇಂದು ತೆರೆಗೆ

Published 4 ಜನವರಿ 2024, 23:45 IST
Last Updated 4 ಜನವರಿ 2024, 23:45 IST
ಅಕ್ಷರ ಗಾತ್ರ
ಈ ವರ್ಷದ ಮೊದಲ ಶುಕ್ರವಾರ(ಜ.5) ಹೊಸಬರ ಚಿತ್ರಗಳಷ್ಟೇ ಚಂದನವನದ ತೆರೆಗಳಲ್ಲಿ ಬಿಡುಗಡೆಯಾಗುತ್ತಿದೆ. 

‘ಆನ್‌ಲೈನ್ ಮದುವೆ, ಆಫ್‌ಲೈನ್ ಶೋಭನ’:

ಅಪ್ಸರ ಮೂವೀಸ್ ಲಾಂಛನದಲ್ಲಿ ವೇಂಪಲ್ಲಿ ಬಾವಾಜಿ ನಿರ್ದೇಶನದ ಹಾಸ್ಯಪ್ರಧಾನ ಸಿನಿಮಾ ಇದಾಗಿದೆ. ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ನಿರ್ದೇಶಕ ಬಾವಾಜಿ ಅವರೇ ಬರೆದಿದ್ದಾರೆ. ಹಾಸ್ಯ ಕಥಾಹಂದರದ ಈ ಸಿನಿಮಾದಲ್ಲಿ ಜಗಪ್ಪ, ಸುಶ್ಮಿತ, ಸೀರುಂಡೆ ರಘು, ಗಜೇಂದ್ರ, ರಾಘವಿ ಸೇರಿದಂತೆ ಗಿಚ್ಚಿ ಗಿಲಿ ಗಿಲಿ, ಮಜಾಭಾರತ, ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಅನೇಕ ಕಲಾವಿದರು ನಟಿಸಿದ್ದಾರೆ. ಯಶಸ್ವಿನಿ, ಚಂದನ, ಶರಣ್ಯರೆಡ್ಡಿ ಮುಂತಾದವರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಬಾಲು ಛಾಯಾಚಿತ್ರಗ್ರಹಣ, ಅಲೆಕ್ಸ್ ಕಲಾವಿದರ ಸಂಗೀತ, ಅರುಣ ಪ್ರಸಾದ್, ವೇಂಪಲ್ಲಿ ಬಾಲಾಜಿ ಸಾಹಿತ್ಯ, ಗಣೇಶ್, ಸದಾಶಿವ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

‘ಒಂಟಿ ಬಂಟಿ ಲವ್‌ಸ್ಟೋರಿ’: 

ಯತೀಶ್‌ ಪನ್ನಸಮುದ್ರ ನಿರ್ದೇಶಿಸಿ, ನಾಯಕನಾಗಿಯೂ ನಟಿಸಿರುವ ಸಿನಿಮಾ ಇದಾಗಿದೆ. ಹಾಸನ ಜಿಲ್ಲೆ ಅರಸೀಕೆರೆಯ ಯತೀಶ್‌, ಎಂಜಿನಿಯರಿಂಗ್ ಪದವೀಧರ. ಸಾಫ್ಟ್‌ವೇರ್‌ ಕಂಪನಿಯಲ್ಲಿ ದುಡಿದು ಇದೀಗ ಬೆಳ್ಳಿತೆರೆಗೆ ಬರುತ್ತಿದ್ದಾರೆ. ಜೀವನದಲ್ಲಿ ಯಾವುದು ಮುಖ್ಯ ಎಂದು ತಿಳಿಯದೆ ಪರದಾಡುವ ಯುವಜನರ ಮಾನಸಿಕ ತೊಳಲಾಟವನ್ನೇ ಕಥೆಯಾಗಿಟ್ಟುಕೊಂಡು ಯತೀಶ್‌ ಈ ಕಥೆ ಹೆಣೆದಿದ್ದಾರೆ. ಚಿತ್ರದಲ್ಲಿ ಶ್ವೇತಾ ಭಟ್ ಮತ್ತು ಶ್ರುತಿ ಚಂದ್ರಶೇಖರ್ ನಾಯಕಿಯಾಗಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT