ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಜಾರ ಸಮುದಾಯದ ‘ನಸಾಬ್’

Published 22 ಜೂನ್ 2024, 5:49 IST
Last Updated 22 ಜೂನ್ 2024, 5:49 IST
ಅಕ್ಷರ ಗಾತ್ರ

ಬಂಜಾರ ಸಮುದಾಯದ ಹುಡುಗನ ಕಥೆಯನ್ನು ಹೊಂದಿರುವ ‘ನಸಾಬ್’ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.

ಯುವ ನಟ ಕೀರ್ತಿಕುಮಾರ್ ನಾಯ್ಕ್ ನಿರ್ದೇಶನದೊಂದಿಗೆ ನಾಯಕನಾಗಿಯೂ ಅಭಿನಯಿಸಿದ್ದಾರೆ. ಶೆಫಾಲಿ ಸಿಂಗ್ ಸೋನಿ ಚಿತ್ರದ ನಾಯಕಿ.‌ ಕೀರ್ತಿ ಕ್ರಿಯೇಷನ್ಸ್ ಲಾಂಛನದಲ್ಲಿ ಸುಜಾತ ಕಿಶೋರ್ ನಾಯ್ಕ್ ಮಗನಿಗಾಗಿ ಬಂಡವಾಳ ಹೂಡಿದ್ದಾರೆ.

‘ಇದು ನನ್ನ ಜೀವನದ ‌ಕಥೆ. ನಮ್ಮ ತಂದೆ ತಾಯಿಗೆ ಹದಿನಾಲ್ಕು ಜನ ಮಕ್ಕಳು. ಕಡು ಬಡತನ. ಅಂತಹ ಬಡ ಕುಟುಂಬದಲ್ಲಿ ಹುಟ್ಟಿದ ಬಂಜಾರ ಸಮುದಾಯದ ಹುಡುಗನೊಬ್ಬ  ವಿದ್ಯಾವಂತನಾಗಿ ಉನ್ನತ ಹುದ್ದೆಯನ್ನು ಅಲಂಕರಿಸುತ್ತಾನೆ‌.‌ ಇದೇ ಚಿತ್ರದ ಕಥಾಹಂದರ’ ಎಂದರು ನಿರ್ಮಾಪಕ ಕಿಶೋರ್‌.

ಬಿ.ಜಯಶ್ರೀ,‌ ಪದ್ಮಾವಾಸಂತಿ, ವಿಜಯಕಾಶಿ,‌ ತಬಲ ನಾಣಿ, ನಾಗೇಂದ್ರ ಅರಸ್, ಶೋಭರಾಜ್, ಪ್ರಕಾಶ್, ಹನುಮಂತೇಗೌಡ ಮುಂತಾದವರು ಚಿತ್ರದಲ್ಲಿದ್ದಾರೆ. ರಾಗಂ ಸಂಗೀತ ಸಂಯೋಜಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT