ಬುಧವಾರ, ನವೆಂಬರ್ 13, 2019
24 °C

ಕನ್ನಡ ರಾಜ್ಯೋತ್ಸವಕ್ಕೆ ಶುಭಾಶಯ ಕೋರಿದ ಸ್ಯಾಂಡಲ್‌ವುಡ್‌ ತಾರೆಯರು

Published:
Updated:
prajavani

ರಾಜ್ಯದಾದ್ಯಂತ ಕನ್ನಡದ ಡಿಂಡಿಮಾದ ಸದ್ದು ಜೋರಾಗಿದ್ದು, ಸ್ಯಾಂಡಲ್‌ವುಡ್‌ ತಾರೆಯರು ತಮ್ಮದೇ ರೀತಿಯಲ್ಲಿ ರಾಜ್ಯೋತ್ಸವಕ್ಕೆ ಶುಭಾಶಯ ಕೋರಿದ್ದಾರೆ.

ನಟ ಶಿವರಾಜ್‌ಕುಮಾರ್‌ ಅವರು ಎಲ್ಲಾದರು ಇರು ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರುವ ಎಂದು ತಾವೇ ಹಾಡಿ ರಾಜ್ಯೋತ್ಸವದ ಶುಭಾಶಯ ಕೋರಿದ್ದಾರೆ. ಇನ್ನು ನಟಿ  ನಟಿ ಹರಿಪ್ರಿಯಾ ಟಂಗ್‌ ಟ್ವಿಸ್ಟರ್‌ ಚಾಲೆಂಜ್‌ ‘ಅಶ್ವತ್ಥ ಅರಳಿ ಮರ ಬುಡ ತಳಿರೊಡೆದೆರೆಡೆಳೆಯಾಯಿತು’ ಕೊಡುವ ಮೂಲಕ ಶುಭಾಶಯ ಹೇಳಿದ್ದಾರೆ. 

ನಟ ಪುನೀತ್‌ ರಾಜ್‌ಕುಮಾರ್‌ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಹಾಡಿನ ವಿಡಿಯೊ ಮಾಡಿ ಶುಭ ಕೋರಿದ್ದಾರೆ. ದರ್ಶನ್‌, ರಶ್ಮಿಕಾ ಮಂದಣ್ಣ, ಗಣೇಶ್‌, ನಿರ್ದೇಶಕ ಸುನಿ... ಹೀಗೆ ಅನೇಕ ತಾರೆಯರು ಕನ್ನಡ ರಾಜ್ಯೋತ್ಸವದ ಖುಷಿ ಹಂಚಿಕೊಂಡಿದ್ದಾರೆ.

'ಕನ್ನಡ ನಾಡಲ್ಲಿ ಹುಟ್ಟಿಬರಲು ಪುಣ್ಯ ಮಾಡಿರಲೇ ಬೇಕು. ಸಮಸ್ತ ಕನ್ನಡ ಕುಲಕೋಟಿಗೆ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಶಯಗಳು 😊 ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ' ಎಂದು ದರ್ಶನ್‌ ಟ್ವಿಟ್ಟರ್‌ನಲ್ಲಿ ಶುಭ ಕೋರಿದ್ದಾರೆ.

 

 

ಪ್ರತಿಕ್ರಿಯಿಸಿ (+)