‘ಗಂಧದಗುಡಿ’ ಬಿಡುಗಡೆ ಹೊಸ್ತಿಲಲ್ಲಿ ನಟ ದಿವಂಗತ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳನ್ನುದ್ದೇಶಿಸಿ ಟ್ವೀಟ್ ಮಾಡಿದ್ದಾರೆ! ಅಷ್ಟೇ ಅಲ್ಲ ಇನ್‌ಸ್ಟಾಗ್ರಾಂನಲ್ಲಿ ರೀಲ್ ಮಾಡಿ ಶುಭರಾತ್ರಿ ಎಂದಿದ್ದಾರೆ!...

ಹೌದು. ಪುನೀತ್ ರಾಜ್‌ಕುಮಾರ್ ಅವರ ಅಧಿಕೃತ ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಂ ಖಾತೆಯಿಂದ ಈ ಪೋಸ್ಟ್‌ಗಳು ಅಪ್‌ಲೋಡ್ ಆಗಿವೆ.

ಪಿಆರ್‌ಕೆ ಪ್ರೊಡಕ್ಷನ್ಸ್‌ನಡಿ, ‘ವೈಲ್ಡ್ ಕರ್ನಾಟಕ’ ಖ್ಯಾತಿಯ ಅಮೋಘವರ್ಷ ಅವರ ಜೊತೆಗೂಡಿ ನಟ ದಿವಂಗತ ಪುನೀತ್ ರಾಜ್‌ಕುಮಾರ್ ತಯಾರಿಸಿದ್ದ ಡಾಕ್ಯೂಫಿಲಂ ‘ಗಂಧದಗುಡಿ’ ನಾಳೆ(ಅ.28) ಕನ್ನಡ ಸೇರಿದಂತೆ ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ತೆರೆಕಾಣುತ್ತಿದೆ. ಇದೇ ಸಂದರ್ಭದಲ್ಲಿ ‘ನಿಮ್ಮನ್ನೆಲ್ಲ ನೋಡುವ ಕಾತರದಲ್ಲಿ’ ಎನ್ನುತ್ತಾ ಟ್ವೀಟ್ ಮಾಡಿರುವ ಪುನೀತ್, ‘ಕಾಡಲ್ಲಿ ಕ್ಯಾಂಪ್ ಮಾಡುತ್ತಿರೋದು ಇದೇ ಮೊದಲ ಅನುಭವ. ಹೇಗಿರುತ್ತದೋ ಗೊತ್ತಿಲ್ಲ. ಶುಭರಾತ್ರಿ’ ಎಂದಿದ್ದಾರೆ.

ಏಕಾಏಕಿ ಅಪ್ಪು ಖಾತೆಗಳಿಂದ ಪೋಸ್ಟ್ ಅಪ್‌ಲೋಡ್ ಆಗಿರುವುದನ್ನು ನೋಡಿ ಅಭಿಮಾನಿಗಳು ಭಾವುಕರಾಗಿದ್ದಾರೆ. ‘ಎಲ್ಲಿಗೆ ಹೋಗಿದ್ರಿ ಇಷ್ಟು ದಿನ’...‘ಅಪ್ಪು ಬಾಸ್ ಬಂದ ಹಾಗೆ ಆಯಿತು’...ಹೀಗೆನ್ನುತ್ತಾ ತಮ್ಮ ಖುಷಿಯನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ. ಪುನೀತ್ ರಾಜ್‌ಕುಮಾರ್ 2021ರ ಅ.29ರಂದು ನಿಧನರಾಗಿದ್ದರು. ಇದಕ್ಕೂ ಮೊದಲು ಇನ್‌ಸ್ಟಾಗ್ರಾಂನಲ್ಲೇ ‘ಗಂಧದಗುಡಿ’ ಟೀಸರ್ ಬಿಡುಗಡೆ ಬಗ್ಗೆ ಅ.27ರಂದು ಪೋಸ್ಟ್ ಮಾಡಿದ್ದರು. ಇದೇ ಅವರ ಕೊನೆಯ ಪೋಸ್ಟ್ ಆಗಿತ್ತು. 2021ರ ಅ.29ರಂದೇ ಶಿವರಾಜ್‌ಕುಮಾರ್ ನಟನೆಯ ‘ಭಜರಂಗಿ–2’ ಬಿಡುಗಡೆಯಾಗಿತ್ತು. ಅಂದು ಬೆಳಗ್ಗೆ 7.33ಕ್ಕೆ ಟ್ವೀಟ್ ಮಾಡಿ ಭಜರಂಗಿ ಚಿತ್ರತಂಡಕ್ಕೆ ಪುನೀತ್ ಶುಭ ಕೋರಿದ್ದರು. ಇದೇ ಅವರ ಕೊನೆಯ ಟ್ವೀಟ್ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.