ಗುರುವಾರ , ಫೆಬ್ರವರಿ 9, 2023
30 °C
ಕಾಂತಾರ ಚಿತ್ರ ಹಿಂದಿ ಆವೃತ್ತಿಗೆ ಸಿನಿಮಾ ಪ್ರಿಯರಿಂದ ಬೆಂಬಲ ವ್ಯಕ್ತವಾಗಿದೆ.

ಹಿಂದಿಯಲ್ಲಿ ಮುಂದುವರಿದ ಕಾಂತಾರ ಓಟ: ₹55 ಕೋಟಿಗೂ ಅಧಿಕ ಗಳಿಕೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಚಿತ್ರಕ್ಕೆ ಎಲ್ಲೆಡೆ ವ್ಯಾಪಕ ಪ್ರಶಂಸೆ ಕೇಳಿಬಂದಿದೆ. ಮತ್ತೊಂದೆಡೆ ಕಾಂತಾರ ಹಿಂದಿ ಯಶಸ್ಸಿನ ಓಟ ಮುಂದುವರಿದಿದ್ದು, ₹55 ಕೋಟಿಗೂ ಅಧಿಕ ಗಳಿಕೆ ಕಂಡಿದೆ.

ಕಾಂತಾರ ಚಿತ್ರ ಸೆಪ್ಟೆಂಬರ್ 30ರಂದು ಕನ್ನಡದಲ್ಲಿ ತೆರೆಕಂಡಿತ್ತು. ಅದಾದ ಬಳಿಕ ಜನರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಅಕ್ಟೋಬರ್ 14ರಂದು ಹಿಂದಿಯಲ್ಲಿ ತೆರೆಕಂಡಿತ್ತು.

ಹಿಂದಿ ಅವತರಣಿಕೆ ಬಿಡುಗಡೆಯಾದ ಮೊದಲ ದಿನವೇ ಕಾಂತಾರ ಚಿತ್ರ ₹1.27 ಕೋಟಿ ಗಳಿಕೆ ದಾಖಲಿಸಿತ್ತು.

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕಾಂತಾರ ಚಿತ್ರವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡಿದೆ.

ಐಎಂಡಿಬಿ ಮತ್ತು ದೇಶದ ಟಾಪ್ 250 ಚಿತ್ರಗಳ ಪಟ್ಟಿಯಲ್ಲಿ ಟಾಪ್ ಸ್ಥಾನವನ್ನು ಕಾಯ್ದುಕೊಂಡಿರುವ ಕಾಂತಾರ, ವಿದೇಶದಲ್ಲೂ ಉತ್ತಮ ಗಳಿಕೆ ಪಡೆದುಕೊಳ್ಳುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು