ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡುಗಡೆಗೆ ಮುನ್ನವೇ ಪ್ರೈಂಗೆ ‘ಕಾಂತಾರ–ಅಧ್ಯಾಯ 1’ ಮಾರಾಟ

Published 21 ಮಾರ್ಚ್ 2024, 0:22 IST
Last Updated 21 ಮಾರ್ಚ್ 2024, 0:22 IST
ಅಕ್ಷರ ಗಾತ್ರ

ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ‘ಕಾಂತಾರ–ಒಂದು ದಂತಕಥೆ’ಯ ಮೊದಲ ಅಧ್ಯಾಯ ಸಿನಿಮಾ ರಿಲೀಸ್‌ಗೂ ಮುನ್ನವೇ ಒಟಿಟಿಗೆ ಮಾರಾಟವಾಗಿದೆ. ದೊಡ್ಡ ಮೊತ್ತಕ್ಕೆ ಪ್ರೈಂ ವಿಡಿಯೊ ಈ ಸಿನಿಮಾವನ್ನು ಖರೀದಿಸಿದ್ದು, ಮಂಗಳವಾರ ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾನು ಖರೀದಿಸಿದ 29 ಸಿನಿಮಾಗಳ ಶೀರ್ಷಿಕೆಯನ್ನು ಪ್ರೈಂ ಘೋಷಿಸಿತು.    

ರಿಷಬ್‌ ಶೆಟ್ಟಿ ಹಾಗೂ ಚಿತ್ರದ ನಿರ್ಮಾಪಕ ವಿಜಯ್‌ ಕಿರಗಂದೂರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವರಾಹ ರೂಪಂ ಹಾಡಿಗೆ ಯಕ್ಷಗಾನ ಕಲಾವಿದರು ಪ್ರದರ್ಶನ ನೀಡಿದ ಬಳಿಕ, ಪ್ರೈಂ ತಂಡವು ‘ಕಾಂತಾರ–ಒಂದು ದಂತಕಥೆ’ ಅಧ್ಯಾಯ 1ರ ಬಿಡುಗಡೆಯನ್ನು ಘೋಷಿಸಿತು. ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದ್ದು, ಹೊಸ ಸಿನಿಮಾ ‘ಕಾಂತಾರ–ಒಂದು ದಂತಕಥೆ’ಯ ಪ್ರೀಕ್ವೆಲ್‌ ಆಗಿದ್ದು, ಕದಂಬರ ಕಾಲದಲ್ಲಿ ನಡೆಯುವ ಕಥೆಯನ್ನು ಹೊಂದಿದೆ.

ಈ ಸಿನಿಮಾದ ಜೊತೆಗೆ ಶಾಹಿದ್‌ ಕಪೂರ್‌ ನಟಿಸುತ್ತಿರುವ ‘ಅಶ್ವತ್ಥಾಮ–ದಿ ಸಾಗಾ ಕಂಟಿನ್ಯೂಸ್‌’ ಸಿನಿಮಾವನ್ನೂ ಪ್ರೈಂ ಖರೀದಿಸಿದೆ. ರಕ್ಷಿತ್‌ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ನಿರ್ದೇಶಿಸಿದ್ದ ಸಚಿನ್‌ ರವಿ ಈ ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ‘ಕಾಂತಾರ’ ಪ್ರೀಕ್ವೆಲ್‌ ಹಾಗೂ ‘ಅಶ್ವತ್ಥಾಮ’ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಬಳಿಕ ಪ್ರೈಂನಲ್ಲಿ ಲಭ್ಯವಾಗಲಿವೆ. ಇವುಗಳ ಜೊತೆಗೆ ಹಿಂದಿಯ ಹಿಟ್‌ ವೆಬ್‌ ಸರಣಿಗಳಾದ ‘ಮಿರ್ಜಾಪುರ್‌’ ಹಾಗೂ ‘ಪಂಚಾಯತ್‌’ನ ಮೂರನೇ ಚಾಪ್ಟರ್‌ಗಳನ್ನೂ ಪ್ರೈಂ ಘೋಷಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT