ಬುಧವಾರ, ಮಾರ್ಚ್ 22, 2023
19 °C

‘ಕಪೋಲ ಕಲ್ಪಿತಂ’ ಟ್ರೇಲರ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೆನ್ಸಾರ್‌ ಅಂಗಳದಲ್ಲಿ ನಿಂತಿದೆ ‘ಕಪೋಲ ಕಲ್ಪಿತಂ’. ಶುಕ್ರವಾರ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಸುಮಿತ್ರಾ ರಮೇಶ್‌ ಗೌಡ ಅವರು ಈ ಚಿತ್ರದ ನಾಯಕಿ ಮತ್ತು ನಿರ್ದೇಶಕಿ.

ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ಸುಮಿತ್ರಾ, ‘ಕಪೋಲ ಕಲ್ಪಿತ ಎಂದರೆ ಸ್ವಯಂ ಕಲ್ಪನೆ ಎಂದು ಅರ್ಥ. ಒಂದು ಸಂಗತಿ ಒಬ್ಬರಿಂದ ಇನ್ನೊಬ್ಬರಿಗೆ ತಲುಪುವಾಗ ಹೆಚ್ಚಿನ ವಿಷಯಗಳು ಸೇರಿಕೊಂಡು ಹಲವಾರು ಸಂದೇಹಗಳಿಗೆ ಕಾರಣವಾಗುತ್ತದೆ.

ಸ್ವಲ್ಪ ಹಾರರ್‌ ಕಥಾ ಹಂದರ ಇರುವ ಚಿತ್ರ ಇದು. ಯುವಕ ತಂಡವೊಂದು ದೂರದಲ್ಲಿರುವ ಮನೆಯೊಳಗೆ ಹೋಗುತ್ತದೆ. ಅಲ್ಲಿ ಭೂತ–ಪ್ರೇತವಿದೆ ಎಂದು ತಿಳಿದುಕೊಂಡು ಸಮಸ್ಯೆಯ ಒಳಗೆ ಸಿಲುಕುತ್ತಾರೆ. ಅಲ್ಲಿಂದ ಹೇಗೆ ತಪ್ಪಿಸಿಕೊಂಡು ಬಂದರು ಎನ್ನುವುದೇ ಕಥಾ ವಸ್ತು. 

ಸುಮಿತ್ರಾ ಅವರಿಗೆ ‘ಜಿಷ್ಣು’ ಚಿತ್ರದಲ್ಲಿ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರೀತಂ ಮಕ್ಕಿ ನಾಯಕ. ನಿವೃತ್ತ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಸಂದೀಪ್‌ ಮಲಾನಿ ಇದ್ದಾರೆ. ನಿರೂಪಕನ ಪಾತ್ರದಲ್ಲಿ ಗೌರೀಶ್‌ ಅಕ್ಕಿ, ಇತರ ಪಾತ್ರಗಳಲ್ಲಿ ಶಿವರಾಜ್‌ ಕರ್ಕೇರ, ರಾಜೇಶ್‌ ಕಣ್ಣೂರ್‌, ವಿನೀತ್‌, ವಿಶಾಲ್‌, ಅಮೋಘ್‌, ಚೈತ್ರಾ ದೀಕ್ಷಿತ್‌ ಗೌಡ ಇದ್ದಾರೆ.

ರಚನೆ, ಚಿತ್ರಕಥೆ, ಸಾಹಿತ್ಯ ಸಂಗೀತ ಗಣಿದೇವ್‌ ಕಾರ್ಕಳ ಅವರದ್ದು. ಸವ್ಯಾಚಿ ಕ್ರಿಯೇಷನ್ಸ್‌ ಮೂಲಕ ಅಕ್ಷರ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿ ರಮೇಶ್‌ ಚಿಕ್ಕೇಗೌಡ ಅವರು ಈ ಚಿತ್ರ ನಿರ್ಮಿಸುತ್ತಿದ್ದಾರೆ. ಕನ್ನಿಕಾ ಪೂಜಾರಿ ಕೂಡಾ ನಿರ್ಮಾಣದಲ್ಲಿ ಪಾಲುದಾರರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು