ಬೆಂಗಳೂರು: ಬಾಲಿವುಡ್ ಸೆಲಿಬ್ರಿಟಿ, ಚಿತ್ರ ನಿರ್ಮಾಪಕ ಕರಣ್ ಜೋಹರ್ ಅವರು ಟ್ವಿಟರ್ ತೊರೆದಿದ್ದಾರೆ.
ಹೌದು, ವಿಪರೀತ ಟ್ರೋಲ್‌ಗಳಿಗೆ ಬೇಸತ್ತು ಅವರು ಟ್ವಿಟರ್‌ಗೆ ಗುಡ್‌ಬೈ ಹೇಳುತ್ತಿರುವುದಾಗಿ, ಕೊನೆ ಟ್ವೀಟ್ ಮಾಡಿ ತಮ್ಮ ಅಕೌಂಟ್‌ನ್ನು ಅಳಿಸಿ ಹಾಕಿದ್ದಾರೆ.
‘ಸಕಾರಾತ್ಮಕ ಚಿಂತನೆಗಳಿಗೆ ಹೆಚ್ಚು ಸಮಯವನ್ನು ಮೀಸಲು ಇಡಬೇಕೆಂದು ನಿರ್ಧರಿಸಿದ್ದೇನೆ. ಈ ಮೂಲಕ ಟ್ವಿಟರ್‌ಗೆ ಗುಡ್‌ಬೈ ಹೇಳುತ್ತಿದ್ದೇನೆ’ ಎಂದು ಕೊನೆಯದಾಗಿ ಟ್ವೀಟ್ ಮಾಡಿದ್ದರು.
ಟ್ವಿಟರ್‌ನಲ್ಲಿ ಸುಮಾರು 17.2 ಮಿಲಿಯನ್ (1.70 ಕೋಟಿ) ಫಾಲೋವರ್‌ಗಳನ್ನು ಹೊಂದಿದ್ದ 50 ವರ್ಷ ವಯಸ್ಸಿನ ಕರಣ್ ಜೋಹರ್ ನಡೆ ಅಭಿಮಾನಿಗಳಿಗೆ ಬೇಸರ ತರಿಸಿದೆ.
ಇತ್ತೀಚೆಗೆ ಅವರ ನಿರ್ಮಾಣದ ಬ್ರಹ್ಮಾಸ್ತ್ರ ಸಿನಿಮಾದ ಟ್ರೋಲ್ ಹಾಗೂ ಅವರ ವೈಯಕ್ತಿಕ ಜೀವನದ ಬಗೆಗಿನ ಟ್ರೋಲ್‌ಗಳಿಗೆ ಕರಣ್ ಅವರು ಬೇಸರಗೊಂಡಿದ್ದರು ಎನ್ನಲಾಗಿದೆ.
ಇನ್ನು ಕರಣ್ ಜೋಹರ್ ಅವರು ಇನ್‌ಸ್ಟಾಗ್ರಾಂ ಹಾಗೂ ಫೇಸ್‌ಬುಕ್ ಖಾತೆಗಳನ್ನು ಅಳಿಸಿಲ್ಲ.ಕರಣ್ ಜೋಹರ್, ಆಲಿಯಾ–ರಣಬೀರ್ ಅಭಿನಯದಲ್ಲಿ ರಾಖಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ.