ಶುಕ್ರವಾರ, ಮಾರ್ಚ್ 31, 2023
32 °C

'ಎ ಮರ್ಡರ್ಡ್ ಮದರ್' ಸಾಕ್ಷ್ಯಚಿತ್ರ ಪ್ರಸಾರಕ್ಕೆ ಹೈಕೋರ್ಟ್ ತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ಹಲವು ಅಪರಾಧ ಪ್ರಕರಣಗಳ ಕಥೆಗಳನ್ನು ಒಳಗೊಂಡ, ‘ಕ್ರೈಮ್ ಸ್ಟೋರೀಸ್ ಇಂಡಿಯಾ ಡಿಟೆಕ್ಟೀವ್’ ಸರಣಿಯ ಮೊದಲ ಕಂತು ‘ಎ ಮರ್ಡರ್ಡ್ ಮದರ್’ ಸಾಕ್ಷ್ಯಚಿತ್ರ ಪ್ರಸಾರ ಮಾಡದಂತೆ ಹೈಕೋರ್ಟ್ ನೆಟ್ ಫ್ಲಿಕ್ಸ್ ಗೆ ಆದೇಶಿಸಿದೆ.

‘ಚಿತ್ರದ ಕಥೆ ಹೊಂದಿರುವ ದೃಶ್ಯಗಳು ಪ್ರಕರಣದಲ್ಲಿನ ಆರೋಪಿಯ ಮುಕ್ತ ಮತ್ತು ನ್ಯಾಯಸಮ್ಮತ ವಿಚಾರಣೆಯ ಹಕ್ಕನ್ನು ಉಲ್ಲಂಘಿಸುತ್ತವೆ’ ಎಂದು ಆರೋಪಿಸಿ ಆರೋಪಿಗಳಲ್ಲಿ ಒಬ್ಬರಾದ ಶ್ರೀಧರ್ ರಾವ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಈ ಕುರಿತ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಂ ಶಾಮ್ ಪ್ರಸಾದ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಓದಿ: 

‘ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಬಾರದು. ಚಿತ್ರವು ಆನ್ ಲೈನ್ ನಲ್ಲಿಯೂ ಲಭ್ಯವಾಗಬಾರದು’ ಎಂದು ಮಧ್ಯಂತರ ಆದೇಶ ನೀಡಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ಅರ್ಜಿದಾರರ ವಾದಾಂಶ: ಸರಣಿಯ ಮೊದಲ ಕಂತಿನಲ್ಲಿ ಪ್ರಸಾರವಾದ ಕಥೆಯಲ್ಲಿ, ಬೆಂಗಳೂರಿನಲ್ಲಿ ತಾಯಿಯೇ ಮಗಳನ್ನು ಕೊಂದ ಕಥೆ ಇದೆ. ಮಗಳ ಗೆಳೆಯನೊಬ್ಬ ಈ ಕೊಲೆಯಲ್ಲಿ ಶಾಮೀಲಾಗಿರುವಂತೆ ತೋರಿಸಲಾಗಿದೆ. ಚಿತ್ರದಲ್ಲಿ ತನಿಖೆಯ ಕೆಲ ಅಂಶಗಳನ್ನೂ ಸೇರಿಸಲಾಗಿದ್ದು, ತಪ್ಪೊಪ್ಪಿಗೆಯ ವಿಡಿಯೋ ತುಣುಕು ಕೂಡಾ ಚಿತ್ರದಲ್ಲಿದೆ.

ಇದು ಆರೋಪಿಯ ನ್ಯಾಯಸಮ್ಮತ ವಿಚಾರಣೆಗೆ ಅಡ್ಡಿಯಾಗುತ್ತದೆ. ಯಾವುದೇ ಸಮರ್ಥನೆ ಇಲ್ಲದ ನಿರೂಪಣೆ ಅರ್ಜಿದಾರರ ಸಾರ್ವಜನಿಕ ಜೀವನ ಮತ್ತು ಖಾಸಗಿ ಬದುಕು ಎರಡರ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ, ಸಾಕ್ಷ್ಯಚಿತ್ರದ ಮೊದಲ ಸರಣಿ ಎ ಮರ್ಡರ್ಡ್ ಮದರ್ ಕಂತು ಪ್ರಸಾರ ಮಾಡದಂತೆ ನಿರ್ದೇಶಿಸಬೇಕು ಎಂದು ಕೋರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು