ಸೋಮವಾರ, ಮೇ 17, 2021
23 °C

ಸಲಿಂಗಕಾಮಿ ಪಾತ್ರದಲ್ಲಿ ಕಾರ್ತಿಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ದೋಸ್ತಾನಾ 2’ ಚಿತ್ರದಲ್ಲಿ ನಟ ಕಾರ್ತಿಕ್‌ ಆರ್ಯನ್ ಸಲಿಂಗ ಕಾಮಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬಾಲಿವುಡ್‌ನಲ್ಲಿ ಇಲ್ಲಿಯವರೆಗೂ ಕಾರ್ತಿಕ್‌  ಮಾಡಿದ ಪಾತ್ರಗಳು ಪಕ್ಕದ್ಮನೆ ಹುಡುಗನಂತಿರುವ ಪಾತ್ರಗಳು. ಈಗ ವಿಭಿನ್ನ ಪಾತ್ರದ ಮೂಲಕ ಪ್ರಯೋಗಕ್ಕೆ ಇಳಿದಿದ್ದಾರೆ.

2008ರಲ್ಲಿ ಬಿಡುಗಡೆಯಾದ ‘ದೋಸ್ತಾನಾ’ ಚಿತ್ರದ ಸೀಕ್ವೆಲ್‌ನಲ್ಲಿ ಕಾರ್ತಿಕ್‌ ‘ಗೇ’ ಯಾಗಿ ನಟಿಸಲಿದ್ದಾರೆ. ಈ ಚಿತ್ರದ ಮೂಲಕ ಲಕ್ಷ್ಯ ಬಾಲಿವುಡ್‌ಗೆ ಪ್ರವೇಶ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಕಾರ್ತಿಕ್‌ ಹಾಗೂ ಲಕ್ಷ್ಯ ಸಲಿಂಗಕಾಮಿ ಜೋಡಿಯಾಗಿ ನಟಿಸುತ್ತಿದ್ದಾರೆ. ‘ದೋಸ್ತಾನಾ ಚಿತ್ರದಲ್ಲಿ ಅಭಿಷೇಕ್‌ ಬಚ್ಚನ್‌ ಹಾಗೂ ಜಾನ್‌ ಅಬ್ರಹಾಂ ಗೇ ಪಾತ್ರದಲ್ಲಿ ನಟಿಸಿದ್ದರು.

ಈ ಸೀಕ್ವೆಲ್‌ನಲ್ಲಿ  ಕಾರ್ತಿಕ್‌, ಲಕ್ಷ್ಯ  ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್‌ ಸಹ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸೀಕ್ವೆಲ್‌ ಚಿತ್ರದ ಕತೆಯೇ ಆಸಕ್ತಿಕರವಾಗಿದೆ. ಕಾರ್ತಿಕ್‌ ಹಾಗೂ ಜಾಹ್ನವಿ ಚಿತ್ರದಲ್ಲಿ ಅಣ್ಣ ತಂಗಿಯಾಗಿ ನಟಿಸಿದ್ದಾರೆ. ಇವರಿಬ್ಬರು ಒಂದೇ ಹುಡುಗನ ಜೊತೆಗೆ ಪ್ರೀತಿಯಲ್ಲಿ ಬೀಳುತ್ತಾರೆ. ಆ ಯುವಕನ ಪಾತ್ರವನ್ನು ನಟ ಲಕ್ಷ್ಯ ನಿರ್ವಹಿಸಿದ್ದಾರೆ. ಇದೇ ಕತೆಯ ಟ್ವಿಸ್ಟ್‌ ಎನ್ನಲಾಗಿದೆ.

ಈ ಚಿತ್ರದ ಮೂರನೇ ಮುಖ್ಯ ಪಾತ್ರಕ್ಕೆ ಕರಣ್‌ ಜೋಹರ್‌ ಅವರು ನಟ ಲಕ್ಷ್ಯ ಅವರ ಹೆಸರನ್ನು ಘೋಷಿಸಿದಾಗ ಅವರ
ಬಗ್ಗೆ ಎಲ್ಲರೂ ಕುತೂಹಲ ತಳೆದಿದ್ದರು. ಲಕ್ಷ್ಯ ಅವರು ಬಣ್ಣದ ಕ್ಷೇತ್ರಕ್ಕೆ ಹೊಸಬರಲ್ಲ. ಟಿವಿ ಕಾರ್ಯಕ್ರಮಗಳಲ್ಲಿ ಈಗಾಗಲೇ ಭಾಗವಹಿಸಿದ್ದರು.

‘ದೋಸ್ತಾನಾ’ 2 ಚಿತ್ರವನ್ನು ಕೋಲಿನ್‌ ಟಿಕುನ್ಹ ನಿರ್ದೇಶಿಸುತ್ತಿದ್ದು, ಈ ಚಿತ್ರದ ಮುಹೂರ್ತವು ಈ ವರ್ಷಾಂತ್ಯದಲ್ಲಿ ನೆರವೇರಲಿದ್ದು, 2020ಕ್ಕೆ ಬಿಡುಗಡೆಯಾಗಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು