ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಯಾಗಿ ಒಂದೂವರೆ ತಿಂಗಳಾಗುತ್ತಿದ್ದು ಇದೀಗ ಕತ್ರಿನಾ ಹನಿಮೂನ್‌ಗಾಗಿ ಮಾಲ್ಡೀವ್ಸ್‌ಗೆ ತೆರಳಿದ್ದ ಹಳೇ ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಮದುವೆಯ ಬಳಿಕ ಕತ್ರಿನಾ ಹಾಗೂ ವಿಕ್ಕಿ ಹನಿಮೂನ್‌ಗಾಗಿ ಮಾಲ್ಡೀವ್ಸ್ ದೇಶಕ್ಕೆ ತೆರಳಿದ್ದರು. ಈ ವಿಚಾರವನ್ನು ಅವರು ರಹಸ್ಯವಾಗಿಟ್ಟಿದ್ದರು.

ಕತ್ರಿನಾ ಮಾಲ್ಡೀವ್ಸ್‌ಗೆ ಹೋಗಿದ್ದ ಚಿತ್ರಗಳನ್ನು ತಡವಾಗಿ ಹಂಚಿಕೊಂಡಿದ್ದಾರೆ. ಈ ಫೋಟೊಗಳಿಗೆ ನೆಟ್ಟಿಗರು ಕತ್ರಿನಾ ಕಾಲೆಳೆದಿದ್ದಾರೆ. ಫೋಟೊದಲ್ಲಿ ನೀವು ಮಾತ್ರ ಕಾಣುತ್ತಿದ್ದೀರಾ ವಿಕ್ಕಿ ಕೌಶಲ್ ಎಲ್ಲಿ ಎಂದುತಮಾಷೆ ಮಾಡುತ್ತಿದ್ದಾರೆ. ಇನ್ನು ಕೆಲವರು ವಿಕ್ಕಿ ಕೌಶಲ್ ಮಿಸ್ಸಿಂಗ್ ಎಂದು ಕಾಮೆಂಟ್ ಹಾಕುತ್ತಿದ್ದಾರೆ.

ಕತ್ರಿನಾ ಹಂಚಿಕೊಂಡಿರುವ ಫೋಟೊಗೆ ವಿಕ್ಕಿ ಗೆಳೆಯರು ಹಾಗೂ ಬಾಲಿವುಡ್ ಸೆಲೆಬ್ರಿಟಿಗಳು ಮೆಚ್ಚುಗೆ ಮಾತುಗಳನ್ನು ಹೇಳಿದ್ದಾರೆ.

ವಿಕ್ಕಿ ಮತ್ತು ಕತ್ರಿನಾ ಡಿಸೆಂಬರ್ 9 ರಂದು ರಾಜಸ್ಥಾನದಲ್ಲಿ ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ವಿವಾಹವಾಗಿದ್ದರು.

ಲಕ್ಷ್ಮಣ್ ಉಟೇಕರ್ ನಿರ್ದೇಶನದ ಚಿತ್ರದಲ್ಲಿ ವಿಕ್ಕಿ ಕೌಶಲ್ ಅಭಿನಯಿಸುತ್ತಿದ್ದಾರೆ. ಇತ್ತ ಕತ್ರಿನಾ ‘ಮೆರ್ರಿ ಕ್ರಿಸ್ಮಸ್’, ಸಲ್ಮಾನ್ ಖಾನ್ ಅಭಿನಯದ ‘ಟೈಗರ್ 3’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.