ಶುಕ್ರವಾರ, ಡಿಸೆಂಬರ್ 3, 2021
25 °C

ವಿಕ್ಕಿ ಕೌಶಲ್ ನಟನೆಯ ಸರ್ದಾರ್ ಉಧಾಮ್ ಸಿಂಗ್‌ಗೆ ಕತ್ರೀನಾ ಕೈಫ್ ಮೆಚ್ಚುಗೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Vicky Kaushal Instapost

ಬೆಂಗಳೂರು: ಜಲಿಯನ್‌ ವಾಲಾಭಾಗ್ ಹತ್ಯಾಕಾಂಡದ ವಿರುದ್ಧ ಸೇಡು ತೀರಿಸಿಕೊಳ್ಳುವ ಸ್ವಾತಂತ್ರ್ಯ ಹೋರಾಟಗಾರ ಉಧಾಮ್ ಸಿಂಗ್ ಅವರ ಕಥೆಯುಳ್ಳ ‘ಸರ್ದಾರ್ ಉಧಾಮ್ ಸಿಂಗ್’ ಚಿತ್ರಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಅಮೆಜಾನ್ ಪ್ರೈಮ್‌ನಲ್ಲಿ ‘ಸರ್ದಾರ್ ಉಧಾಮ್ ಸಿಂಗ್’ ಚಿತ್ರ ಬಿಡುಗಡೆಯಾಗಿದ್ದು, ನಾಯಕನ ಪಾತ್ರದಲ್ಲಿ ವಿಕ್ಕಿ ಕೌಶಲ್ ನಟಿಸಿದ್ದಾರೆ.

ವಿಕ್ಕಿ ಕೌಶಲ್ ಅವರ ಜತೆಗೆ ಒಡನಾಟ ಹೊಂದಿರುವ ನಟಿ ಕತ್ರೀನಾ ಕೈಫ್, ತಮ್ಮ ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲಿ ಉಧಾಮ್ ಸಿಂಗ್ ಚಿತ್ರದ ಕುರಿತು ಪೋಸ್ಟ್ ಮಾಡಿದ್ದು, ‘ವಿಕ್ಕಿ ಕೌಶಲ್’ ಅವರ ನಟನೆ ಅದ್ಭುತವಾಗಿದೆ ಎಂದು ಹೊಗಳಿದ್ದಾರೆ.

ಚಿತ್ರದ ಪೋಸ್ಟರ್ ಅನ್ನು ಕೂಡ ಕತ್ರೀನಾ ಕೈಫ್ ಹಂಚಿಕೊಂಡಿದ್ದು, ಉಧಾಮ್ ಸಿಂಗ್ ಸಿನಿಮಾ ನೋಡಿ ಎಂದು ಹೇಳಿದ್ದಾರೆ.


ನಟಿ ಕತ್ರೀನಾ ಕೈಫ್- ಇನ್‌ಸ್ಟಾಗ್ರಾಂ ಸ್ಟೋರೀಸ್‌

ವಿಕ್ಕಿ ಕೌಶಲ್ ಅವರ ಜತೆ ಕತ್ರೀನಾ ಕೈಫ್ ಸಂಬಂಧ ಹೊಂದಿದ್ದಾರೆ ಎಂಬ ಗಾಸಿಪ್ ಮಧ್ಯೆಯೇ ವಿಕ್ಕಿ ಕುರಿತು ಕತ್ರೀನಾ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು