ಕೌರವ ವೆಂಕಟೇಶ್ ನಿರ್ದೇಶಿಸುತ್ತಿರುವ ‘ಪೈನಾ’ ಚಿತ್ರ ಇತ್ತೀಚೆಗಷ್ಟೇ ಸೆಟ್ಟೇರಿದೆ. ಅವರು ಈ ಹಿಂದೆ ‘ನೋ ಕೋಕೇನ್’ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಕಾನಿಷ್ಕ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಆರ್.ಕನಿಷ್ಕ ಮತ್ತು ಆರ್.ವೇದಿಶ್ ಬಂಡವಾಳ ಹೂಡುತ್ತಿದ್ದಾರೆ.

ಪ್ರಿಯಾ ಹಾಸನ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಲೀಲಾ ಮೋಹನ್, ಚಿರಾಗ್ ಚಾಲುಕ್ಯ ನಾಯಕರು. ಮಧುಶ್ರೀ, ತೃಪ್ತಿ ಬಸವರಾಜು ನಾಯಕಿಯರು. ಯೋಗರಾಜ್ ಭಟ್, ರಂಗಾಯಣ ರಘು, ಸಾಧು ಕೋಕಿಲ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದಾರೆ.

‘ಪೈನಾ ಎಂಬುದು ಮಗುವಿನ ಹೆಸರು. ಇದರಿಂದಲೇ ಚಿತ್ರವು ಶುರುವಾಗುತ್ತದೆ. ಹಾರರ್, ಥ್ರಿಲ್ಲರ್ ಅಂಶಗಳು ಹೆಚ್ಚಾಗಿ ಇರುವುದರಿಂದ ಸಣ್ಣ ಎಳೆ ಬಿಟ್ಟುಕೊಟ್ಟರೂ ಕಥೆಯ ಸಾರಾಂಶ ತಿಳಿಯುತ್ತದೆ. ಹೀಗಾಗಿ ಕಥೆ ಬಗ್ಗೆ ಏನೂ ಹೇಳುವುದಿಲ್ಲ. ಚಿಕ್ಕಮಗಳೂರು, ಬೆಂಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಲು ಯೋಜನೆ ಹಾಕಿಕೊಳ್ಳಲಾಗಿದೆ’ ಎಂದರು ನಿರ್ದೇಶಕರು.

ಕಲ್ಕಿ ಅಭಿಷೇಕ್ ಸಂಗೀತ, ಮುಂಜಾನೆ ಮಂಜು ಛಾಯಾಚಿತ್ರಗ್ರಹಣ, ಲೋಹಿತ್ ಸಂಕಲನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.