ಕೀರ್ತಿ ವರ್ಕೌಟ್ ಚಿತ್ರ ವೈರಲ್

‘ಮಹಾನಟಿ’ ಖ್ಯಾತಿಯ ನಟಿ ಕೀರ್ತಿಸುರೇಶ್ ಕಳೆದ ವರ್ಷ ಹಲವು ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿದ್ದರು. ಕೈಯಲ್ಲಿ ಭರಪೂರ ಅವಕಾಶ ಹೊಂದಿರುವ ಕೀರ್ತಿ ಬ್ಯುಸಿ ಶೆಡ್ಯೂಲ್ ಮಧ್ಯೆಯೂ ಜಿಮ್ನಲ್ಲಿ ವರ್ಕೌಟ್ ಮಾಡೋದು ತಪ್ಪಿಸೋದಿಲ್ಲ.
ತಮ್ಮ ಮುಂಬರುವ ಸಿನಿಮಾಗಳಲ್ಲಿನ ಪಾತ್ರಗಳಿಗೆ ತಕ್ಕಂತೆ ದೇಹಸಿರಿ ರೂಪಿಸಿಕೊಳ್ಳಲು ಕಂಕಣಬದ್ಧರಾಗಿರುವ ಕೀರ್ತಿ ಜಿಮ್ನಲ್ಲಿ ವರ್ಕೌಟ್ ಮಾಡಿದ ನಂತರದ ಚಿತ್ರವೊಂದನ್ನು ಈಚೆಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರ ಕೀರ್ತಿ ಅಭಿಮಾನಿಗಳಲ್ಲಿ ಪುಳಕ ಮೂಡಿಸಿದ್ದು, ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.
ಮೊಬೈಲ್ ಫೋನ್ ನೋಡುತ್ತಿರುವ ತೆಳ್ಳಗಿರುವ ಕೀರ್ತಿ ಚಿತ್ರ ಇದಾಗಿದ್ದು. ‘ಬೆಳಗಿನ ವರ್ಕೌಟ್ಸ್ಗಿಂತ ಮಿಗಿಲಾದದ್ದು ಬೇರಿಲ್ಲ’ ಎಂದು ಫೋಟೊಕ್ಕೆ ಒಕ್ಕಣೆ ಬರೆದುಕೊಂಡಿದ್ದಾರೆ. ಕೀರ್ತಿ ಶೀಘ್ರದಲ್ಲೇ ಬಾಲಿವುಡ್ಗೂ ಪದಾರ್ಪಣೆ ಮಾಡಲಿದ್ದು, ಅಜಯ್ ದೇವಗನ್ಗೆ ಜೋಡಿಯಾಗಿ ನಟಿಸುತ್ತಿದ್ದಾರೆ.
#KeerthySuresh transformation for her Bollywood debut! pic.twitter.com/qgffd2OIZp
— Cinema Bulletin (@cinemabulletin) June 3, 2019
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.