ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಜಿಎಫ್-2 ಮೊದಲ ದಿನದ ಕಲೆಕ್ಷನ್ ಎಷ್ಟು? ಬಾಲಿವುಡ್‌ ದಾಖಲೆಗಳೇ ದೂಳಿಪಟ!

Last Updated 15 ಏಪ್ರಿಲ್ 2022, 10:49 IST
ಅಕ್ಷರ ಗಾತ್ರ

ಬೆಂಗಳೂರು: ಇಂದು ಜಗತ್ತಿನಾದ್ಯಂತ ತೆರೆ ಕಂಡಿರುವ ಪ್ಯಾನ್ ಇಂಡಿಯಾ ಚಿತ್ರ ಕೆ.ಜಿ.ಎಫ್ ಚಾಪ್ಟರ್ 2 ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸಿದೆ ಎಂಬುದು ಆರಂಭಿಕ ಲೆಕ್ಕಾಚಾರ.

ಯಶ್‌ ಅಭಿನಯದ ಈ ಸಿನಿಮಾ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಬಾಲಿವುಡ್‌ನ್ನೇ ಬೆರಗುಗೊಳಿಸುವಂತೆ ಮಾಡಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಕೆಲ ಇಂಗ್ಲಿಷ್ ವಾಹಿನಿಗಳ ವರದಿ ಹಾಗೂ ಬಾಕ್ಸ್‌ ಆಫೀಸ್ ಇಂಡಿಯಾ.ಕಾಮ್ ಪ್ರಕಾರ ಕೆಜಿಎಫ್ ಚಾಪ್ಟರ್ 2 ಸಿನಿಮಾ ಮೊದಲ ದಿನದಲ್ಲೇ ₹125 ಕೋಟಿ ಗಳಿಕೆ ಕಂಡಿದೆ ಎನ್ನಲಾಗಿದೆ. ಇನ್ನೊಂದು ವಿಶೇಷವೆಂದರೆ, ಹಿಂದಿಯಲ್ಲಿ ಬಿಡುಗಡೆಯಾಗಿ ಮೊದಲ ದಿನವೇ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ದಾಖಲೆಯನ್ನು ಈ ಚಿತ್ರ ಮಾಡಿದೆ.

ಎಸ್.ಎಸ್. ರಾಜಮೌಳಿ ಅವರ ‘ಬಾಹುಬಲಿ ದಿ ಬಿಗಿನಿಂಗ್‌’ನ ಹಿಂದಿ ಅವತರಣಿಕೆ ಮೊದಲ ದಿನ ಸುಮಾರು ₹37 ಕೋಟಿ ಗಳಿಸಿತ್ತು. ಇದೀಗ ಕೆಜಿಎಫ್ ಚಾಪ್ಟರ್–2 ₹39 ಕೋಟಿ ಗಳಿಸಿರುವುದಾಗಿ ವರದಿಗಳು ಹೇಳಿವೆ.

ಟೈಗರ್ ಶ್ರಾಫ್ ಹಾಗೂ ಹೃತಿಕ್ ರೋಷನ್ ಅವರ ವಾರ್ ಸಿನಿಮಾ ಮೊದಲ ದಿನ ₹29 ಕೋಟಿ, ಅಮಿರ್ ಖಾನ್ ಅವರ ತಗ್ಸ್ ಆಫ್ ಹಿಂದೂಸ್ತಾನ್ ₹26 ಕೋಟಿ, ಸಲ್ಮಾನ್ ಖಾನ್ ಅವರ ಟೈಗರ್ ಜಿಂದಾ ಹೈ ₹24 ಕೋಟಿ ಗಳಿಸಿತ್ತು.

ಭಾರತೀಯ ಸಿನಿಮಾ ರಂಗದಲ್ಲಿ ಅತ್ಯಧಿಕ ಗಳಿಕೆ ಕಂಡ (ಸುಮಾರು ₹1200 ಕೋಟಿ) ಸಿನಿಮಾ ಎಂಬ ಖ್ಯಾತಿ ಗಳಿಸಿರುವ ಬಾಹುಬಲಿ ದಿ ಬಿಗಿನಿಂಗ್‌ನ ದಾಖಲೆಯನ್ನು ಹಾಗೂ ಸಾವಿರ ಕೋಟಿ ದಾಟಿರುವ ಆರ್‌ಆರ್‌ಆರ್‌ ಚಿತ್ರದ ದಾಖಲೆಯನ್ನುಕೆಜಿಎಫ್ ಚಾಪ್ಟರ್ 2 ಅಳಿಸಿ ಹಾಕುತ್ತಾ ಎಂಬುದನ್ನು ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT