ಭಾನುವಾರ, ಜೂನ್ 26, 2022
21 °C

₹ 1,200 ಕೋಟಿ ತಲುಪಿದ ಕೆಜಿಎಫ್‌–2 ಗಳಿಕೆ: ಹೊಸ ದಾಖಲೆ ಬರೆದ ರಾ ‘ಕಿಂಗ್‌’

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್‌–2 ಚಿತ್ರದ ಗಳಿಕೆಯು ₹ 1,200 ಕೋಟಿ ತಲುಪಿದೆ ಎಂದು ಸಿನಿಮಾ ಕಲೆಕ್ಷನ್‌ ವಿಶ್ಲೇಷಕ ರಮೇಶ್‌ ಬಾಲಾ ಟ್ವೀಟ್ ಮಾಡಿದ್ದಾರೆ.

ಅವರ ಪ್ರಕಾರ, ಕೆಜಿಎಫ್‌–2 ಚಿತ್ರವು ಭಾರತವೊಂದರಲ್ಲೇ ₹ 1,000 ಕೋಟಿ ಗಳಿಸುವಲ್ಲಿ ಸಫಲವಾಗಿದೆ. 

ಅಮೀರ್ ಖಾನ್ ದಂಗಲ್‌ ಹಾಗೂ ಪ್ರಭಾಸ್‌ ಅಭಿನಯದ ಬಾಹುಬಲಿ–2 ಚಿತ್ರದ ನಂತರ  ₹ 1,200 ಕೋಟಿ ಗಳಿಕೆ ಮಾಡಿದ ಭಾರತದ ಮೂರನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಕೆಜಿಎಫ್‌–2 ಪಾತ್ರವಾಗಿದೆ. 

ಸಾವಿರ ಕೋಟಿ ಕ್ಲಬ್‌ನಲ್ಲಿ ದಂಗಲ್ ಸಿನಿಮಾ ಮೊದಲ ಸ್ಥಾನದಲ್ಲಿದೆ. ಎಸ್‌.ಎಸ್. ರಾಜಮೌಳಿ ನಿರ್ದೇಶನದ ಬಾಹುಬಲಿ ಹಾಗೂ ಆರ್‌ಆರ್‌ಆರ್‌ ಚಿತ್ರಗಳು ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಇದೀಗ ಕನ್ನಡದ ʼಕೆಜಿಎಫ್-2ʼ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. 
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು