ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

KGF ಟ್ರೇಲರ್ | ದಾಖಲೆಯ ಕೋಟಿ ಕೋಟಿ ವೀಕ್ಷಣೆ; ಸಾಮಾಜಿಕ ಮಾಧ್ಯಮಗಳಲ್ಲಿ ಯಶ್‌ ಹವಾ

Last Updated 28 ಮಾರ್ಚ್ 2022, 9:56 IST
ಅಕ್ಷರ ಗಾತ್ರ

ಕೆಜಿಎಫ್‌ನಲ್ಲಿ ಗರುಡನ ಸಾಯಿಸಿದ ಮೇಲೆ ಮುಂದೇನಾಯಿತು...ನೀವು ಓದ್ತಿರಾ? ಎಂಬ ಸಾಲಿನ ಮೂಲಕ 'ಕೆಜಿಎಫ್ ಚಾಪ್ಟರ್‌ 2' ಚಿತ್ರದ ಟ್ರೇಲರ್‌ ತೆರೆದುಕೊಳ್ಳುತ್ತದೆ.

ಯುಟ್ಯೂಬ್‌ನಲ್ಲಿ ಟ್ರೇಲರ್‌ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ದಾಖಲೆ ವೀಕ್ಷಣೆ ಕಂಡಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತುಹಿಂದಿ ಭಾಷೆಗಳಲ್ಲಿಟ್ರೇಲರ್‌ ಬಿಡುಗಡೆಯಾಗಿದೆ.'ಹಿಂಸೆ ನನಗಿಷ್ಟವಿಲ್ಲ... ಆದರೆ, ಹಿಂಸೆ ನನ್ನನ್ನು ಇಷ್ಟ ಪಡುತ್ತದೆ. ಹಾಗಾಗಿ ನಾನು ಅದನ್ನು ನಿವಾರಿಸಲು ಆಗದು...' ಎಂದು ನಟ ಯಶ್ ಇಂಗ್ಲಿಷ್‌ನಲ್ಲಿ ಹೇಳುವ ಡೈಲಾಗ್‌ ಟ್ರೇಲರ್‌ನ ಪಂಚ್ ಲೈನ್ ಆಗಿದೆ.

ಮಾರ್ಚ್ 28ರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕನ್ನಡದಲ್ಲಿ ಈ ಸಿನಿಮಾದ ಟ್ರೇಲರ್ 1.7 ಕೋಟಿ ವೀಕ್ಷಣೆ ಕಂಡಿದೆ. ಹಿಂದಿಯಲ್ಲಿ 3.8 ಕೋಟಿ, ತಮಿಳಿನಲ್ಲಿ 1 ಕೋಟಿ, ತೆಲುಗಿನಲ್ಲಿ 1.2 ಕೋಟಿ,ಮಲಯಾಳಂನಲ್ಲಿ 60ಲಕ್ಷಬಾರಿ ವೀಕ್ಷಣೆ ಕಂಡಿದೆ.

ಪಂಚ ಭಾಷೆಗಲ್ಲಿ ಈಟ್ರೇಲರ್‌ 8.3 ಕೋಟಿ ವೀಕ್ಷಣೆ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದೆ.

ರಾಜಕೀಯ, ಮಾಫಿಯಾ ಹಾಗೂ ಜನರ ಬಿಡುಗಡೆಗೆ ಬಂದ ನಾಯಕ; ಈ ಮೂವರ ನಡುವೆ ನಡೆಯುವ ಸಂಘರ್ಷದ ಕಥನವನ್ನು ಕೆಜಿಎಫ್‌ ಚಾಪ್ಟರ್–2 ತೋರಲಿದೆ ಎಂಬುದನ್ನು ಟ್ರೇಲರ್‌ ತಿಳಿಸುತ್ತದೆ.

ದೃಶ್ಯಗಳು ಮತ್ತು ಸೌಂಡ್ ಎಫೆಕ್ಟ್‌ ಟ್ರೇಲರ್‌ ಅನ್ನು ಪರಿಣಾಮಕಾರಿಯಾಗಿಸಿದೆ.

ಪ್ರಶಾಂತ್ ನೀಲ್ ನಿರ್ದೇಶನ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕೆಜಿಎಫ್ ಚಾಪ್ಟರ್ 2 ಸಿನಿಮಾ ಏಪ್ರಿಲ್ 14 ಕ್ಕೆ ಬಿಡುಗಡೆಯಾಗಲಿದೆ.

ಯಶ್‌, ಸಂಜಯ್ ದತ್, ಶ್ರೀನಿಧಿ ಶೆಟ್ಟಿ, ರವೀನಾ ಟಂಡನ್, ಪ್ರಕಾಶ್ ರಾಜ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT