ಕೆಜಿಎಫ್‌ಗಾಗಿ ಸ್ನಾನ ಬಿಟ್ಟ ಪ್ರಶಾಂತ್‌ ನೀಲ್‌!

7

ಕೆಜಿಎಫ್‌ಗಾಗಿ ಸ್ನಾನ ಬಿಟ್ಟ ಪ್ರಶಾಂತ್‌ ನೀಲ್‌!

Published:
Updated:
Deccan Herald

ಬೆಂಗಳೂರು: ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗಿರುವ ‘ಕೆಜಿಎಫ್‌’ ಸಿನಿಮಾ ಡಿ. 21ಕ್ಕೆ ಬಿಡುಗಡೆಯಾಗುತ್ತಿದೆ. ಯಶ್‌ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರದ ಟೀಸರ್‌ ಮೆಚ್ಚುಗೆ ಪಡೆದುಕೊಂಡಿತ್ತು. ಮೊದಲು ನವೆಂಬರ್‌ನಲ್ಲಿ ಬಿಡುಗಡೆ ಮಾಡುತ್ತೇವೆ ಎಂದಿದ್ದ ಚಿತ್ರತಂಡ ನಂತರ ಡಿ. 21ಕ್ಕೆ ಬಿಡುಗಡೆಯ ದಿನಾಂಕವನ್ನು ಮುಂದೂಡಿತ್ತು. 

ಕನ್ನಡ ಮಾರುಕಟ್ಟೆಯನ್ನು ವಿಸ್ತರಿಸುತ್ತಿರುವ ಸಿನಿಮಾ ಎಂದೇ ‘ಕೆಜಿಎಫ್‌’ ಬಿಂಬಿತವಾಗುತ್ತಿದೆ. ಮುಂಬೈಯಿಂದ ಹಿಡಿದು ಕೋಲಾರದ ಚಿನ್ನದ ಗಣಿಯವರೆಗೆ ಈ ಸಿನಿಮಾದ ಕಥೆ ಹಬ್ಬಿಕೊಂಡಿರುವುದು ಟೀಸರ್‌ನಲ್ಲಿಯೇ ಗೊತ್ತಾಗುವಂತಿದೆ.

ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗಿರುವ ಸಿನಿಮಾ ಎಂದರೆ ಸಾಮಾನ್ಯವೇ? ಅದರ ಬಿಡುಗಡೆಯ ಕೆಲಸಗಳೂ ಅಷ್ಟೇ ಜೋರಾಗಿರುತ್ತದೆ. ನಾಯಕ ಯಶ್‌ ತಂದೆಯಾಗಿರುವ ಸಂಭ್ರಮದಲ್ಲಿ ಮುಳುಗಿದ್ದರೆ ನಿರ್ದೇಶಕ ಪ್ರಶಾಂತ್ ನೀಲ್‌ ಮಾತ್ರ ಕೆಜಿಎಫ್‌ ಕೆಲಸದಲ್ಲಿ ಪೂರ್ತಿ ಬ್ಯುಸಿಯಾಗಿದ್ದಾರೆ. ಎಷ್ಟು ಬ್ಯುಸಿಯಾಗಿದ್ದಾರೆ ಎಂದರೆ ಎಂಟ್ಹತ್ತು ದಿನಗಳಿಂದ ಸ್ನಾನವನ್ನೂ ಮಾಡಿಲ್ಲವಂತೆ. ಇನ್ನು ಸಿನಿಮಾದ ಕುರಿತು ಮಾತನಾಡುವ ಪ್ರಸಂಗವಂತೂ ಇಲ್ಲವೇ ಇಲ್ಲ ಬಿಡಿ. 

ಇತ್ತೀಚೆಗೆ ಮಾಧ್ಯಮದವರು ಸಿನಿಮಾ ಕುರಿತು ಮಾತನಾಡಲು ಕೇಳಿಕೊಂಡಾಗ ಪ್ರಶಾಂತ್‌ ನೀಲ್‌ ಅವರೇ ತಮ್ಮ ಪರಿಸ್ಥಿತಿಯನ್ನು ಹೇಳಿಕೊಂಡಿದ್ದಾರೆ. ‘ಸದ್ಯಕ್ಕೆ ಸಿನಿಮಾದ ಬಗ್ಗೆ ಮಾತನಾಡಲು ಪುರಸೊತ್ತಿಲ್ಲ. ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಸಾಕಷ್ಟು ಕೆಲಸಗಳಿವೆ. ಕಳೆದ ಎಂಟ್ಹತ್ತು ದಿನಗಳಿಂದ ಸ್ನಾನವನ್ನೂ ಮಾಡಿಲ್ಲ ನಾನು. ಡಿ. 22ರ ನಂತರ ಬಿಡುವಾಗುತ್ತೇನೆ. ಆವಾಗ ಬೇಕಾದರೆ ಮಾತನಾಡೋಣ’ ಎಂದು ತಮ್ಮ ಅಸಹಾಯಕ ಪರಿಸ್ಥಿತಿಯ ಕುರಿತು ಅವರು ಹೇಳಿಕೊಂಡಿದ್ದಾರೆ.

ಸಿನಿಮಾಕ್ಕಾಗಿ ಹಗಲಿರುಳು ಎನ್ನದೆ ಕೆಲಸ ಮಾಡುವವರನ್ನು ಗಾಂಧಿನಗರ ನೋಡಿದೆ. ಆದರೆ ಎಂಟ್ಹತ್ತು ದಿನಗಳ ಕಾಲ ಸ್ನಾನವನ್ನೂ ಮಾಡದೆ ಸಿನಿಮಾ ಕೆಲಸದಲ್ಲಿ ಮುಳುಗಿರುವ ನಿರ್ದೇಶಕರು ಬಹುಶಃ ಇವರೊಬ್ಬರೇ ಇರಬೇಕು. ಹಲವು ದಾಖಲೆಗಳನ್ನು ನಿರ್ಮಿಸಲು ಸಜ್ಜಾಗುತ್ತಿದೆ ’ಕೆಜಿಎಫ್‌’. ಆ ಚಿತ್ರದ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರ ಬದ್ಧತೆಯೂ ಒಂದು ದಾಖಲಾಗಬೇಕಾದ ಸಂಗತಿಯೇ.

ಬರಹ ಇಷ್ಟವಾಯಿತೆ?

 • 27

  Happy
 • 5

  Amused
 • 1

  Sad
 • 1

  Frustrated
 • 7

  Angry

Comments:

0 comments

Write the first review for this !