ಕುತೂಹಲ ಹೆಚ್ಚಿಸುವ ‘ಕೆಜಿಎಫ್‌’ ಎರಡನೇ ಟ್ರೇಲರ್‌

7

ಕುತೂಹಲ ಹೆಚ್ಚಿಸುವ ‘ಕೆಜಿಎಫ್‌’ ಎರಡನೇ ಟ್ರೇಲರ್‌

Published:
Updated:

ಬೆಂಗಳೂರು: ರಾಕಿಂಗ್‌ ಸ್ಟಾರ್‌ ಅಭಿನಯಿಸಿರುವ ಬಹುನಿರೀಕ್ಷಿತ ಕೆಜಿಎಫ್‌ ಚಿತ್ರದ ಎರಡನೇ ಟ್ರೇಲರ್‌ ಬುಧವಾರ ಸಂಜೆ ಬಿಡುಗಡೆಯಾಗಿದೆ. ಟ್ರೇಲರ್‌ ಬಿಡುಗಡೆಯಾಗಿ ಒಂದೇ ಗಂಟೆಯಲ್ಲಿ 2.8 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. 

ಒಡಲಲ್ಲಿ ಚಿನ್ನವನ್ನು ಇಟ್ಟುಕೊಂಡ ನಾಡು, ಅದನ್ನು ಬಗೆಯುತ್ತಿರುವ ಜನರು, ಎಲ್ಲವನ್ನೂ ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಪವರ್‌ ಸಂಪಾದಿಸಿ ಬರುವ ಹುಡುಗ. ಅಂಡರ್‌ವರ್ಲ್ಡ್, ಜನರ ಅಳಲು, ಅಸಹಾಯಕತೆ ಮತ್ತು ಅಪಾರ ಶಕ್ತಿ ಕ್ರೋಢೀಕರಿಸಿಕೊಂಡ ಜನರ ನಾಯಕ; ಮತ್ತೊಬ್ಬರ ಪಾಲಿನ ವಿಲನ್‌! ಇಲ್ಲಿ ನಾಯಕ ಪಾತ್ರ ಒಂದೊಂದು ದೃಶ್ಯದಲ್ಲಿ ಒಂದೊಂದು ಕಥೆಯನ್ನು ಹೇಳುವಂತಿದೆ. 

ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗಿರುವ ಕೆಜಿಎಫ್‌ ಚಾಪ್ಟರ್‌ 1 ಸಿನಿಮಾಗೆ ಪಕ್ಕದ ತೆಲುಗು ಮತ್ತು ತಮಿಳು ಸಿನಿಮಾ ಪ್ರಿಯರಿಂದಲೂ ಉತ್ತಮ ಸ್ಪಂದನೆ ದೊರೆತಿದೆ. 

ಇದನ್ನೂ ಓದಿ: ಸುಮ್ನೆ ಬೈಬೇಡಿ: ಕೆಜಿಎಫ್‌ ಹಾಡಲ್ಲಿ ಕನ್ನಡವೂ ಉಂಟು!

ಮೊದಲ ಟ್ರೇಲರ್‌ನಲ್ಲಿ ಕಾಣುವಂತೆ, ಈ ಸಿನಿಮಾ ಕಥೆ 1958ರಿಂದ ಆರಂಭವಾಗುತ್ತದೆ. ಟ್ರೇಲರ್‌ನಲ್ಲಿರುವ ದೃಶ್ಯಗಳು ಕೂಡ ಸರಿದುಹೋಗಿರುವ ಕಾಲವೊಂದನ್ನು ನೆನಪಿಗೆ ತಂದುಕೊಡುತ್ತವೆ. ಆಕ್ರೋಶ, ಕಿಚ್ಚು, ಹಟ ಸಾಧಿಸುವ ಅಂಶಗಳು ಸಿನಿಮಾದಲ್ಲಿ ಇರಲಿವೆ ಎಂಬ ಸೂಚನೆಯನ್ನೂ ನೀಡುತ್ತದೆ. 

ಟ್ರೇಲರ್‌ನಲ್ಲಿ ಹಿರಿಯ ನಟ ಅನಂತ್‌ ನಾಗ್‌ ಅವರ ನಿರೂಪಣೆಯನ್ನು ಕೇಳಬಹುದು. ಚಿತ್ರದ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಅಭಿನಯಿಸಿದ್ದು, ಪ್ರಶಾಂತ್‌ ನೀಲ್‌ ಸಿನಿಮಾ ನಿರ್ದೇಶಿಸಿದ್ದಾರೆ. ರವಿ ಬಸ್ರೂರ್‌ ಸಂಗೀತವಿದ್ದು, ವಿಜಯ್‌ ಕಿರಗಂದೂರ್‌ ಕೆಜಿಎಫ್‌ ನಿರ್ಮಿಸಿದ್ದಾರೆ. ಡಿಸೆಂಬರ್‌ 21ರಂದು ಸಿನಿಮಾ ತೆರೆಕಾಣಲಿದೆ. 

ಇದನ್ನೂ ಓದಿ: ಕೆಜಿಎಫ್‌ಗಾಗಿ ಸ್ನಾನ ಬಿಟ್ಟ ಪ್ರಶಾಂತ್‌ ನೀಲ್‌!

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !