ರಾಕಿಂಗ್ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆಯನ್ನೇ ಹುಟ್ಟಿಹಾಕಿದೆ. ಕನ್ನಡ ಮಾತ್ರವಲ್ಲದೇ ಹಿಂದಿ, ತೆಲುಗು ಹಾಗೂ ಮಲಯಾಳದಲ್ಲೂ ಮೂಡಿ ಬರುತ್ತಿರುವುದು ಈ ಸಿನಿಮಾದ ವಿಶೇಷ.

ಡಿ.21ರಂದು ಕೆಜಿಎಫ್ ತೆರೆಗೆ ಬರಲಿದೆ. ಅದೇ ದಿನ ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ‘ಝೀರೊ’ ಸಿನಿಮಾವೂ ಬಿಡುಗಡೆಯಾಗಲಿದೆ. ಈಚೆಗೆ ‘ಕೆಜಿಎಫ್’ ಸಿನಿಮಾದ ಪೋಸ್ಟರ್ ನಾಲ್ಕು ಭಾಷೆಗಳಲ್ಲೂ ಬಿಡುಗಡೆಯಾಗಿತ್ತು. ಈ ಸಿನಿಮಾದ ಹಿಂದಿ ಅವತರಣಿಕೆಯ ಬಿಡುಗಡೆ ಜವಾಬ್ದಾರಿಯನ್ನು ಬಾಲಿವುಡ್ನ ರಿತೇಶ್ ಸಿದ್ವಾನಿ ಹಾಗೂ ಫರ್ಹಾನ್ ಅಖ್ತರ್ ವಹಿಸಿಕೊಂಡಿದ್ದಾರೆ.

‘ಕೆಜಿಎಫ್’ ಮೇಲಿನ ನಿರೀಕ್ಷೆಯ ಜೊತೆಗೆ ನಟ ಯಶ್ ಹಾಗೂ ಫರ್ಹಾನ್ ವಿರುದ್ಧ ಶಾರುಖ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಧಮ್ಕಿ ಹಾಕಿದ್ದಾರೆ.

ಈಚೆಗೆ ಫರ್ಹಾನ್ ಅಖ್ತರ್, ಡಿ.21ರಂದು ಸಿನಿಮಾ ತೆರೆಗೆ ಬರಲಿದೆ ಎಂಬ ಮಾಹಿತಿಯನ್ನು ತನ್ನ ಟ್ವಿಟರ್ ಖಾತೆಯಲ್ಲಿ ಸಿನಿಮಾದ ಪೋಸ್ಟರ್ ಜೊತೆಗೆ ಹಂಚಿಕೊಂಡಿದ್ದರು. ಅದೇ ದಿನ ‘ಝೀರೊ’ ಸಿನಿಮಾವು ತೆರೆಗೆ ಬರಲಿರುವ ಕಾರಣಕ್ಕೆ ಶಾರುಖ್ ಅಭಿಮಾನಿಗಳು ಫರ್ಹಾನ್ ಅಖ್ತರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಹರಿಹಾಯ್ದಿದ್ದಾರೆ.

‘ಝೀರೊ’ ಬಿಡುಗಡೆಯಂದೇ ‘ಕೆಜಿಎಫ್’ ಬಿಡುಗಡೆ ಯಾಕೆ ಎಂದು ಪ್ರಶ್ನಿಸಿರುವ ಶಾರುಖ್ ಅಭಿಮಾನಿಗಳು ಬಾಲಿವುಡ್ ಬಾದ್ಶಾ ವಿರುದ್ಧವಾಗಿ ಬರುತ್ತಿರುವ ನಿಮ್ಮಂಥವರಿಗೆ ಬುದ್ದಿ ಕಲಿಸುತ್ತೇವೆ ಎಂದು ಕೆಟ್ಟ ಪದಗಳಲ್ಲಿ ಧಮ್ಕಿ ಹಾಕಿದ್ದಾರೆ.

ಈ ಸಂಬಂಧ ಫೋಸ್ಟರ್ ಜೊತೆಗೆ ಟ್ವೀಟ್ ಮಾಡಿರುವ ಫರ್ಹಾನ್, ‘ಕೆಜಿಎಫ್ ಪರಿಚಯಿಸುತ್ತಿದ್ದೇವೆ. ಚಿನ್ನದ ಈ ಪ್ರದೇಶದ ಶಕ್ತಿಯಿದು. ಅಪ್ಪಟ ಚಿನ್ನವಿದು. ಚಿನ್ನ, ಸಂಪತ್ತು ಒಲಿಯುವುದು ವೀರರಿಗೆ, ಧೀರರಿಗೆ, ಶಕ್ತಿಶಾಲಿಗಳಿಗೆ. ಈ ಸಿನಿಮಾಗೆ ಶುಭವಾಗಲಿ’ ಎಂದು ಶಾರುಖ್ ಅಭಿಮಾನಿಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಯಶ್ಗೆ ಧಮ್ಕಿ..!

ಫರ್ಹಾನ್ ಖಾನ್ ವಿರುದ್ಧವಷ್ಟೇ ಅಲ್ಲದೇ ರಾಕಿಂಗ್ ಸ್ಟಾರ್ ಯಶ್ ವಿರುದ್ಧವೂ ಶಾರುಖ್ ಅಭಿಮಾನಿಗಳು ಕಿಡಿಕಾರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ.

ಅಭಿಮಾನಿಯೊಬ್ಬ ಅಂಧಾಭಿಮಾನದಿಂದ ಟ್ವೀಟ್ ಮಾಡಿದ್ದು, ‘so called star #Yash ಶಾರುಖ್ ವಿರುದ್ಧ ಬಂದರೆ, ನಿನ್ನ ಅಂತಿಮ ಯಾತ್ರೆ ನಡೆಯಲಿದೆ’ ಎಂದು ಧಮ್ಕಿ ಹಾಕಿದ್ದಾನೆ. ಇದಕ್ಕೆ ಯಶ್ ಅಭಿಮಾನಿಗಳು ಸಹ ಅಷ್ಟೇ ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದಾರೆ.

‘ಅಂತಿಮ ಯಾತ್ರೆ ಯಾರಿಗೆ ಆಗುತ್ತೆ ಅಂತ ನೋಡೋಣ. ಕನ್ನಡಿಗರ ಶಕ್ತಿಯನ್ನು ತುಚ್ಛವಾಗಿ ಕಾಣಬೇಡಿ. ‘ಕೆಜಿಎಫ್’ ಭಾರತೀಯ ಸಿನಿಮಾ ರಂಗದಲ್ಲಿ ದಾಖಲೆ ನಿರ್ಮಿಸಲಿದೆ. ಕಾದು ನೋಡಿ’ ಎಂದು ಸತೀಶ್ ಖುರ್ದ್ ಎಂಬುವರು ಶಾರುಖ್ ಅಭಿಮಾನಿಯ ಕಾಮೆಂಟ್ಗೆ ತಿರುಗೇಟು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.