ಖುಷಿ, ಆರ್ಯನ್ ಬಾಲಿವುಡ್‌ ಪ್ರವೇಶ

7

ಖುಷಿ, ಆರ್ಯನ್ ಬಾಲಿವುಡ್‌ ಪ್ರವೇಶ

Published:
Updated:

ಬಾಲಿವುಡ್‌ನ ಮೋಹಕ ತಾರೆ ಶ್ರೀದೇವಿಯ ಮಗಳು ಜಾಹ್ನವಿ ಕಪೂರ್‌ ‘ಧಡಕ್‌’ ಸಿನಿಮಾದ ಮೂಲಕ ಬಾಲಿವುಡ್‌ ಪ್ರವೇಶಿಸಿದ್ದು, ಮೊದಲ ಸಿನಿಮಾದಲ್ಲಿಯೇ ಉತ್ತಮ ನಟನೆಗಾಗಿ ಪ್ರಶಂಸೆ ಗಿಟ್ಟಿಸಿಕೊಂಡಿರುವುದು ಎಲ್ಲರಿಗೂ ಗೊತ್ತಿದೆ. ಜಾಹ್ನವಿ ತಂಗಿ, ಶ್ರೀದೇವಿ ಎರಡನೇ ಪುತ್ರಿ ಖುಷಿ ಕಪೂರ್‌ ಸದ್ಯದಲ್ಲೇ ಬಾಲಿವುಡ್‌ಗೆ ಕಾಲಿಡಲಿದ್ದಾರೆ. 

ಖುಷಿಕಪೂರ್‌ ಜೊತೆ ನಾಯಕನಾಗಿ ನಟಿಸಲಿರುವವರು ಬಾಲಿವುಡ್‌ನ ಸ್ಟಾರ್‌ ನಟ ಶಾರುಕ್‌ ಖಾನ್‌ ಅವರ ಮಗ ಆರ್ಯನ್‌. ಈ ಇಬ್ಬರೂ ಸ್ಟಾರ್‌ ಮಕ್ಕಳನ್ನು ಶೀಘ್ರದಲ್ಲೇ ಬಾಲಿವುಡ್‌ಗೆ ಪರಿಚಯಿಸಲು ನಿರ್ಮಾಪಕ ಕರಣ್‌ ಜೋಹರ್‌ ಸಿದ್ಧತೆ ನಡೆಸಿದ್ದಾರೆ. ಈ ಇಬ್ಬರನ್ನು ದೊಡ್ಡಮಟ್ಟದಲ್ಲಿ ಬಾಲಿವುಡ್‌ಗೆ ಎಂಟ್ರಿ ಕೊಡಿಸಬೇಕು ಎಂಬುದು ಅವರ ಲೆಕ್ಕಾಚಾರ.  

‘ಖುಷಿ, ಆರ್ಯನ್ ಯಾವಾಗ ಬಾಲಿವುಡ್‌ಗೆ ಪ್ರವೇಶಿಸುತ್ತಾರೋ ಗೊತ್ತಿಲ್ಲ, ಆದರೆ ಅವರನ್ನು ಬಾಲಿವುಡ್‌ಗೆ ಕರೆತರುವುದು ಕರಣ್‌ ಅವರೇ. ಈ ಇಬ್ಬರ ಬಾಲಿವುಡ್‌ ಪ್ರವೇಶದ ವಿವರವನ್ನು ರಹಸ್ಯವಾಗಿಡಲಾಗಿದೆ. ಉತ್ತಮ ಚಿತ್ರಕತೆಗಾಗಿ ಹುಡುಕಾಟ ನಡೆಯುತ್ತಿದೆ’ ಎಂದು ಮೂಲಗಳು ತಿಳಿಸಿವೆ. 

ಜಾಹ್ನವಿ ಕಪೂರ್‌ ಅವರನ್ನೂ ‘ಧಡಕ್‌’ ಸಿನಿಮಾದ ಮೂಲಕ ಬಾಲಿವುಡ್‌ಗೆ ಕರೆತಂದವರು ಕರಣ್. ಈ ಚಿತ್ರ ಹಿಟ್‌ ಆಗಿತ್ತು. ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದವರು ನಟ ಶಾಹೀದ್‌ ಕಪೂರ್‌ ತಮ್ಮ ಇಶಾನ್‌ ಖಟ್ಟರ್‌. ಅವರಿಗೂ ಅದು ಮೊದಲ ಸಿನಿಮಾವಾಗಿತ್ತು. ಹೀಗೆ ಸಾಲು ಸಾಲು ಸ್ಟಾರ್‌ ಮಕ್ಕಳನ್ನು ಬಾಲಿವುಡ್‌ಗೆ ಪರಿಚಯಿಸಿದ್ದರಿಂದ ಕರಣ್‌ಗೆ ‘ಸ್ವಜನಪಕ್ಷಪಾತದ ಪಿತಾಮಹ’ ಎಂದು ಟೀಕೆಯೂ ಬಂದಿದೆ. ಆದರೆ ಇಂತಹ ಟೀಕೆಗಳಿಗೆ ಅವರು ತಲೆಕೆಡಿಸಿಕೊಂಡಂತಿಲ್ಲ.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !