ಶನಿವಾರ, ಮಾರ್ಚ್ 28, 2020
19 °C

ಟಾಪ್‌ಲೆಸ್‌ ಫೋಟೊಶೂಟ್‌ಗೆ ಆಕ್ಷೇಪ: ರತ್ನಾನಿಗೆ ಸೀರೆ ಉಡಿಸಿದ ನೆಟ್ಟಿಗರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಖ್ಯಾತ ಪ್ಯಾಶನ್‌ ಫೋಟೋಗ್ರಾಫರ್ ಡಬ್ಬೂ ರತ್ನಾನಿಗೆ ನೆಟ್ಟಿಗರು ಸೀರೆ ಉಡಿಸುವ ಮೂಲಕ ಟ್ರೋಲ್‌ ಮಾಡಿದ್ದಾರೆ.

ಡಬ್ಬೂ ರತ್ನಾನಿ ಅವರಿಗೆ ನೆಟ್ಟಿಗರು ಸೀರೆ ಉಡಿಸಲು ಕಾರಣ ಇದೆ. ರತ್ನಾನಿ 2020ನೇ ಸಾಲಿನ ಗ್ಲ್ಯಾಮರ್ ಕ್ಯಾಲೆಂಡರ್‌  ಹೊರತರುತ್ತಿದ್ದು ಅದಕ್ಕಾಗಿ ಬಾಲಿವುಡ್‌ ನಟಿಯರ ಟಾಪ್‌ ಲೆಸ್‌ ಫೋಟೊಶೂಟ್‌ ಮಾಡುತ್ತಿದ್ದಾರೆ. ಈಗಾಗಲೇ ಭೂಮಿ ಪಡ್ನೇಕರ್‌, ಕಿಯಾರ ಅಡ್ವಾಣಿ ಮತ್ತು ಸನ್ನಿ ಲಿಯೋನ್‌ ಅವರ ಟಾಪ್‌ ಲೆಸ್‌ ಫೋಟೊಶೂಟ್‌ ಮಾಡಿದ್ದಾರೆ. 

ಈ ನಟಿ ಮಣಿಯರು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು. ಕೆಲವರು ಈ ರೀತಿಯ ಫೋಟೊಶೂಟ್‌ಗೆ ಆಕ್ಷೇಪ ವ್ಯಕ್ತಪಡಿಸಿದರೆ, ಇನ್ನು ಕೆಲವರು ರತ್ನಾನಿಗೆ ಸೀರೆ ಉಡಿಸಿ ಟ್ರೋಲ್‌ ಮಾಡಿದ್ದಾರೆ. 

ಕಿಯಾರ ಅಡ್ವಾಣಿ ಟಾಪ್ ಲೆಸ್ ಆಗಿರುವ ಪೋಟೊಗೂ ನೆಟ್ಟಿಗರು ಸೀರೆ ಉಡಿಸಿ ಈ ರೀತಿ ಫೋಟೊಶೂಟ್‌ ಮಾಡಬೇಕು ಎಂದು ರತ್ನಾನಿ ಮತ್ತು ಕಿಯಾರ ಅವರ ಕಾಲೆಳೆದಿದ್ದಾರೆ. 

ಟಾಪ್‌ಲೆಸ್‌ ಆಗಿದ್ದ ಕಿಯಾರ, ಕೈಯಲ್ಲಿ ಎಲೆ ಹಿಡಿದು ಎದೆ ಭಾಗವನ್ನು ಮುಚ್ಚಿಕೊಂಡಿದ್ದರು. ಇದೇ ಚಿತ್ರವನ್ನು ನೆಟ್ಟಿಗರು ಮಧುಮಗಳಂತೆ ಸಿಂಗಾರ ಮಾಡಿದ್ದಾರೆ. ತರಹೇವಾರಿ ಸೀರೆಗಳನ್ನು ಉಡಿಸಿ, ಸುಂದರವಾದ ಚಿತ್ರ ಹಾಗೂ ಸುಂದರವಾದ ಫೋಟೊಶೂಟ್‌ ಎಂದರೆ ಈ ರೀತಿ ಇರಬೇಕು ಎಂದು ಹೇಳಿದ್ದಾರೆ. 

ಟ್ರೋಲ್‌ಗಳು...

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)