ಮಹಿಳಾ ಪ್ರಧಾನ ಚಿತ್ರದಲ್ಲಿ ಕಿಯಾರಾ ಅಡ್ವಾಣಿ

ಗುರುವಾರ , ಜೂನ್ 20, 2019
26 °C
‘ಇಂದೂ ಕಿ ಜವಾನಿ’ ಸಿನಿಮಾದಲ್ಲಿ ಕಿಯಾರಾ

ಮಹಿಳಾ ಪ್ರಧಾನ ಚಿತ್ರದಲ್ಲಿ ಕಿಯಾರಾ ಅಡ್ವಾಣಿ

Published:
Updated:
Prajavani

ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿಗೆ ಈ ವರ್ಷ ಅದೃಷ್ಟ ಖುಲಾಯಿಸಿದೆ. ಈ ವರ್ಷ ದೊಡ್ಡದೊಡ್ಡ ಪ್ರಾಜೆಕ್ಟ್‌ಗಳನ್ನೇ ಒಪ್ಪಿಕೊಂಡಿರುವ ಕಿಯಾರಾ, ಸದ್ಯಕ್ಕೆ ವಿಕ್ರಮ್ ಭಟ್ ಅವರ ‘ಶೇರ್ ಷಾ’ ಸಿನಿಮಾದ ಚಿತ್ರೀಕರಣದಲ್ಲಿದ್ದಾರೆ. ಈ ಚಿತ್ರದಲ್ಲಿ ಸಿದ್ಧಾರ್ಥ್‌ ಮಲ್ಹೋತ್ರಾ ಪ್ರಧಾನ ಪಾತ್ರದಲ್ಲಿದ್ದಾರೆ. 

ಈ ಸಿನಿಮಾ ಮುಗಿಯುವ ಮುನ್ನವೇ ಕಿಯಾರಾ, ಮಹಿಳಾ ಪ್ರಧಾನ ಸಿನಿಮಾ ’ಇಂದು ಕಿ ಜವಾನಿ’ಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ಸುದ್ದಿ ಹೊರಬಿದ್ದಿದೆ. ಗಾಜಿಯಾಬಾದ್‌ನ ಧೈರ್ಯವಂತ ಯುವತಿ ಇಂದೂ ಗುಪ್ತಾ ಅನ್ನುವ ಪಾತ್ರದಲ್ಲಿ ಅವರು ನಟಿಸುತ್ತಿದ್ದಾರೆ. 

ಈ ಚಿತ್ರವನ್ನು ನಿಖಿಲ್ ಅಡ್ವಾಣಿ, ನಿರಂಜನ್ ಅಯ್ಯಂಗಾರ್ ಮತ್ತು ರಯಾನ್ ಸ್ಟೀಫನ್ ನಿರ್ಮಿಸುತ್ತಿದ್ದು, ಬಂಗಾಳಿ ನಿರ್ದೇಶಕ ಅಬಿರ್ ಸೇನ್‌ಗುಪ್ತಾ ನಿರ್ದೇಶಿಸುತ್ತಿದ್ದಾರೆ. ಇದು ಅವರ ಪ್ರಥಮ ಹಿಂದಿ ಚಿತ್ರವೂ ಹೌದು.

‘ಕೆಲ ದಿನಗಳ ಹಿಂದೆ ಮಗಳು ಕಿಯಾರಾ ನನ್ನ ಕಚೇರಿಗೆ ಬಂದಿದ್ದಳು. ಆಗ ಕಚೇರಿ ಗೋಡೆಯ ಮೇಲಿನ ಪೋಸ್ಟರ್‌ಗಳನ್ನು ಗಮನಿಸಿ, ಅಲ್ಲಿ ಬರೀ ಗಂಡು ಮಕ್ಕಳ ಚಿತ್ರಗಳೇ ಇವೆ. ಹೆಣ್ಮಕ್ಕಳ ಚಿತ್ರಗಳು ಏಕಿಲ್ಲ ಎಂದು ಪ್ರಶ್ನಿಸಿದಳು. ಅದೇ ಸಮಯಕ್ಕೆ ಸರಿಯಗಿ ನಿರಂಜನ್ ಮತ್ತು ರಯಾನ್ ಹೊಸ ಚಿತ್ರದ ಕಥೆಯನ್ನು ಹೇಳಿದರು. ಆಗಲೇ ಕಿಯಾರಾಳನ್ನು ಹಾಕಿಕೊಂಡು ನಾಯಕಿ ಪ್ರಧಾನ ಚಿತ್ರ ನಿರ್ಮಿಸಬೇಕೆಂದು ನಿಶ್ಚಯಿಸಿದೆ’ ಎಂದು ನಿಖಿಲ್ ಅಡ್ವಾಣಿ ಹೇಳಿಕೊಂಡಿದ್ದಾರೆ.  

 ‘ಇಂದೂ ಕಿ ಜವಾನಿ’ ಕಿಯಾರಾ ಅವರ ಮೊದಲ ಮಹಿಳಾ ಪ್ರಧಾನ ಚಿತ್ರ. ಡೇಟಿಂಗ್ ಆ್ಯಪ್‌ಗಳ ಸುತ್ತ ಹೆಣೆದಿರುವ ಚಿತ್ರಕಥೆ ಇದಾಗಿದ್ದು, ಇದರಲ್ಲಿ ಇಂದೂಳ ಭಾಷೆ ಸಂಪೂರ್ಣ ಭಿನ್ನವಾಗಿದೆ. ‘ಈ ಚಿತ್ರದ ಕಥೆ ಇಂದಿಗೆ ಪ್ರಸ್ತುತವಾಗಿದೆ. ಇಂದೂ ಅನ್ನುವಂಥ ಪಾತ್ರ ಮಾಡಲು ನನಗೆ ಹೆಮ್ಮೆ ಅನಿಸುತ್ತಿದೆ. ನನ್ನ ಪಾಲಿಗೆ ಇದೊಂದು ವಿಶೇಷ ಪ್ರಾಜೆಕ್ಟ್’ ಎನ್ನುತ್ತಾರೆ ಕಿಯಾರಾ ಅಡ್ವಾಣಿ. 

‘ನಾನಂತೂ ಡೇಟಿಂಗ್ ಆ್ಯಪ್ ಬಳಸುವುದಿಲ್ಲ. ಆದರೆ, ನನ್ನ ಕೆಲವು ಸ್ನೇಹಿತರು ಇದನ್ನು ಬಳಸುತ್ತಾರೆ. ಅವರ ಅನುಭವ ಚಿತ್ರ ನೈಜವಾಗಿ ಮೂಡಿಬರಲು ಸಹಕಾರಿ ಯಾಗುತ್ತದೆ’ ಅನ್ನುವುದು ಕಿಯಾರಾ ಅಭಿಮತ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !