‘ಅಭಿನಯ ಚಕ್ರವರ್ತಿ’ ಸುದೀಪ್ಗೆ ಇಂದು ಜನ್ಮದಿನದ ಸಂಭ್ರಮ. ಆದರೆ, ಕೋವಿಡ್–19 ಪರಿಣಾಮ ನಾನು ಈ ವರ್ಷ ಜನ್ಮದಿನ ಆಚರಿಸಿಕೊಳ್ಳುವುದಿಲ್ಲ. ಗುಂಪುಗೂಡುವುದು ಸರಿಯಲ್ಲ. ಹಾಗಾಗಿ, ಬೆಂಗಳೂರಿನ ಮನೆಯ ಬಳಿಗೆ ಯಾರೊಬ್ಬರು ಬರಬೇಡಿ ಎಂದು ಅಭಿಮಾನಿಗಳಿಗೆ ಕಿಚ್ಚ ಹೇಳಿದ್ದಾರೆ.

ನಿನ್ನೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದ ಅವರು ಶ್ರೀಗಳಿಂದ ಅಶೀರ್ವಾದ ಪಡೆದರು. ಸಾಮಾಜಿಕ ಜಾಲತಾಣದಲ್ಲಿ ಕಿಚ್ಚನಿಗೆ ಚಿತ್ರರಂಗದ ಗಣ್ಯರು ಜನ್ಮದಿನ ಶುಭಾಶಯ ಕೋರಿದ್ದಾರೆ. ಅಭಿಮಾನಿಗಳು ವಿಡಿಯೊ ಸಾಂಗ್ ಮೂಲಕ ಶುಭಾಶಯ ಕೋರಿರುವುದು ವಿಶೇಷ.

ಸುದೀಪ್ ಕನ್ನಡ ಚಿತ್ರರಂಗ ಪ್ರವೇಶಿಸಿ 25 ವರ್ಷಗಳು ಸಂದಿವೆ. ಅವರು ಬಣ್ಣದಲೋಕ ಪ್ರವೇಶಿಸಿದ್ದು 1996ರ ಜನವರಿ 31ರಂದು ‘ಬ್ರಹ್ಮ’ ಚಿತ್ರದ ಮೂಲಕ. ಕನ್ನಡ, ಹಿಂದಿ, ತೆಲುಗು ಮತ್ತು ತಮಿಳು ಸೇರಿದಂತೆ 67 ಚಿತ್ರಗಳಿಗೆ ಅವರು ಬಣ್ಣ ಹಚ್ಚಿದ್ದಾರೆ.ಅವರು ನಿರ್ದೇಶಿಸಿದ ಮೊದಲ ಚಿತ್ರ ‘ಮೈ ಆಟೋಗ್ರಾಫ್’. ಅವರೊಳಗೆ ಹಲವು ವರ್ಷಗಳಿಂದ ಬೆಚ್ಚಗೆ ಕುಳಿತಿದ್ದ ನಿರ್ದೇಶಕನ ಪ್ರತಿಭೆಗೆ ಈ ಸಿನಿಮಾ ಕನ್ನಡಿ ಹಿಡಿಯಿತು. ಬಳಿಕ ‘ಶಾಂತಿ ನಿವಾಸ’, ‘ಜಸ್ಟ್ ಮಾತ್ ಮಾತಲ್ಲಿ’, ‘ವೀರ ಮದಕರಿ’ ಹಾಗೂ ‘ಕೆಂಪೇಗೌಡ’ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದರು.

‘ಫ್ಯಾಂಟಮ್’ ಚಿತ್ರದ ಬಳಿಕ ಅವರು ಸ್ವಮೇಕ್ ಚಿತ್ರವೊಂದಕ್ಕೆ ಆ್ಯಕ್ಷನ್ ಕಟ್ ಹೇಳುವ ಮೂಲಕ ಮತ್ತೆ ನಿರ್ದೇಶನದತ್ತ ಹೊರಳಲು ನಿರ್ಧರಿಸಿದ್ದಾರೆ. ಅವರೇ ಕೆಲವು ದಿನಗಳ ಹಿಂದೆ ಟ್ವಿಟರ್ನಲ್ಲಿ ಈ ಬಗ್ಗೆ ಹೇಳಿಕೊಂಡಿದ್ದು ಉಂಟು.

ಪ್ರಸ್ತುತ ಶಿವಕಾರ್ತಿಕ್ ನಿರ್ದೇಶನದ ‘ಕೋಟಿಗೊಬ್ಬ 3’ ಚಿತ್ರದಲ್ಲಿ ನಟಿಸಿದ್ದಾರೆ. ಇದು ಬಿಡುಗಡೆಯ ಹಂತದಲ್ಲಿದೆ. ಇದಕ್ಕೆ ಬಂಡವಾಳ ಹೂಡಿರುವುದು ಸೂರಪ್ಪಬಾಬು.

‘ಫ್ಯಾಂಟಮ್’ ಚಿತ್ರದ ಟೀಸರ್ ಬಿಡುಗಡೆ ಇಲ್ಲ

ಸುದೀಪ್ ನಟಿಸುತ್ತಿರುವ ಮತ್ತೊಂದು ಬಹುನಿರೀಕ್ಷಿತ ಚಿತ್ರ ‘ಫ್ಯಾಂಟಮ್’. ಇದಕ್ಕೆ ಆ್ಯಕ್ಷನ್ ಕಟ್ ಹೇಳಿರುವುದು ಅನೂಪ್ ಭಂಡಾರಿ. ಇದಕ್ಕೆ ಜಾಕ್ ಮಂಜು ಬಂಡವಾಳ ಹೂಡಿದ್ದಾರೆ.

ಇದರ ಶೂಟಿಂಗ್ ಹೈದರಾಬಾದ್ನಲ್ಲಿ ನಡೆಯುತ್ತಿದೆ. ಕಿಚ್ಚನ ಹುಟ್ಟುಹಬ್ಬದಂದು ಈ ಸಿನಿಮಾದ ಟೀಸರ್ ಕೂಡ ಬಿಡುಗಡೆಯಾಗಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹಬ್ಬಿತ್ತು. ಆದರೆ, ಅನೂಪ್ ಭಂಡಾರಿ ‘ಫ್ಯಾಂಟಮ್’ ಚಿತ್ರದ ಟೀಸರ್ ಬಿಡುಗಡೆ ಮಾಡುವುದಿಲ್ಲ ಎಂದು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.

‘ಸುದೀಪ್ ಅವರ ಜನ್ಮದಿನದ ಅಂಗವಾಗಿ ಇಂದು ‘ಕೋಟಿಗೊಬ್ಬ 3’ ಸಿನಿಮಾದ ಟೀಸರ್ ಬಿಡುಗಡೆಯಾಗಲಿದೆ. ಹಾಗಾಗಿ, ‘ಫ್ಯಾಂಟಮ್’ ಸಿನಿಮಾದ ಟೀಸರ್ ಬಿಡುಗಡೆ ಮಾಡುವುದಿಲ್ಲ. ಟೀಸರ್ ಬಿಡುಗಡೆಯ ದಿನಾಂಕದ ಬಗ್ಗೆ ಶೀಘ್ರವೇ ಮಾಹಿತಿ ಹಂಚಿಕೊಳ್ಳುತ್ತೇನೆ’ ಎಂದು ಅನೂಪ್ ಭಂಡಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.