ಸ್ಯಾಂಡಲ್‌ವುಡ್‌ನಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೊದಲ್ಲಿ‘ಫ್ಯಾಂಟಮ್’ ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಫ್ಯಾಂಟಮ್ ಚಿತ್ರದ ಅಧಿಕೃತ ಫಸ್ಟ್ ಲುಕ್ ನಿನ್ನೆಯಷ್ಟೇ ಬಿಡುಗಡೆಯಾಗಿದೆ.

ಫ್ಯಾಂಟಮ್ ಚಿತ್ರದಲ್ಲಿನ ‘ವಿಕ್ರಾಂತ್ ರೋಣಾ’ ಪಾತ್ರಧಾರಿ ಫಸ್ಟ್‌ಲುಕ್‌ಗೆ ಅಭಿಮಾನಿಗಳಷ್ಟೇ ಅಲ್ಲ, ಚಿತ್ರರಂಗದ ಹಲವು ಖ್ಯಾತನಾಮರೂ ಫಿದಾ ಆಗಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಕಿಚ್ಚನ ಈ ಲುಕ್ಕಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ನಟರಾದ ರಕ್ಷಿತ್ ಶೆಟ್ಟಿ, ಕಬೀರ್ ದುಹಾನ್ ಸಿಂಗ್, ರಿತೇಶ್ ದೇಶ್‌ಮುಖ್ ಮುಂತಾದವರು ‘ವಿಕ್ರಾಂತ್ ರೋಣಾ’ನ ಅವತಾರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಫ್ಯಾಂಟಮ್‌ಗೆ ಆ್ಯಕ್ಷನ್ ಕಟ್ ಹೇಳುತ್ತಿರುವುದು‘ರಂಗಿತರಂಗ’ ಖ್ಯಾತಿಯ ಅನೂಪ್ ಭಂಡಾರಿ. ಚಿತ್ರಕ್ಕೆ ಬಂಡವಾಳ ಹೂಡಿರುವುದು ಶಾಲಿನಿ ಆರ್ಟ್ಸ್ ಬ್ಯಾನರ್‌ನಡಿ ಸುದೀಪ್ ಅವರ ಆಪ್ತ ಸ್ನೇಹಿತಜಾಕ್ ಮಂಜು. ಈ ಚಿತ್ರಕ್ಕೂ ಮೊದಲುಅನೂಪ್ ಭಂಡಾರಿ, ಸುದೀಪ್ ನಟನೆಯ ‘ಬಿಲ್ಲಾ ರಂಗ ಭಾಷಾ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಬೇಕಿತ್ತು. ‘ಫ್ಯಾಂಟಮ್’ ಮುಗಿದ ಮೇಲೆ‘ಬಿಲ್ಲಾ ರಂಗ ಭಾಷಾ’ ಚಿತ್ರವೂ ಆರಂಭವಾಗಲಿದೆ ಎನ್ನುವ ಮಾಹಿತಿ ಚಿತ್ರತಂಡದಿಂದ ಬಂದಿದೆ. ಆದರೆ, ಇನ್ನೊಂದು ಹೊಸ ಸುದ್ದಿ ಏನೆಂದರೆ, ‘ಫ್ಯಾಂಟಮ್’ ಮುಗಿದ ಮೇಲೆ ಸುದೀಪ್ ಅವರ ಇನ್ನೊಂದು ಹೊಸ ಚಿತ್ರ ಘೋಷಣೆಯಾಗಲಿದೆ.

ಎನ್.ಕುಮಾರ್ ನಿರ್ಮಾಣದಲ್ಲಿ ಈ ಚಿತ್ರ ಸೆಟ್ಟೇರಲಿರುವ ನಿರೀಕ್ಷೆ ಇದೆ. ಇದು ಕೂಡ ದೊಡ್ಡ ಬಜೆಟ್‌ನ ಸಿನಿಮಾ ಆಗಲಿದೆ. ಈ ಚಿತ್ರಕ್ಕೆ ಇನ್ನು ಹೆಸರು ಅಂತಿಮಗೊಂಡಿಲ್ಲ. ಸುದೀಪ್ ಹುಟ್ಟುಹಬ್ಬ ಸೆ.2ರಂದು ಇರುವುದರಿಂದ ಆ ದಿನವೇ ಹೊಸ ಚಿತ್ರವನ್ನು ಘೋಷಿಸುವ ಮೂಲಕ ಚಿತ್ರತಂಡ ಕಿಚ್ಚನ ಹುಟ್ಟುಹಬ್ಬದ ಸಂಭ್ರಮ ದ್ವಿಗುಣಗೊಳಿಸುವ ಯೋಜನೆಯನ್ನೂ ಹಾಕಿಕೊಂಡಿದೆಯಂತೆ.

‘september 2' ಎನ್ನುವ ಶೀರ್ಷಿಕೆಯನ್ನು ಕಿಚ್ಚನ ಅಭಿಮಾನಿಗಳು ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಮಾಡುತ್ತಿದ್ದಾರೆ. ಆದರೆ, ಶೀರ್ಷಿಕೆ ‘ಸೆಪ್ಟೆಂಬರ್ 2’ ಅಂತೂ ಆಗಿರುವುದಿಲ್ಲ. ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ತಾಂತ್ರಿಕ ತಂಡ ಮತ್ತು ಉಳಿದ ಕಲಾವಿದರ ತಂಡವನ್ನು ಸದ್ಯದಲ್ಲೇ ಆಯ್ಕೆ ಮಾಡಲಾಗುತ್ತದೆ ಎನ್ನುತ್ತಾರೆ ಕಿಚ್ಚನ ಆಪ್ತರು.

ಈ ನಡುವೆ ಸುದೀಪ್ ನಟನೆಯ ಬಹುನಿರೀಕ್ಷೆಯ ಚಿತ್ರ ‘ಕೋಟಿಗೊಬ್ಬ–3’ ಬಹುತೇಕ ಪೂರ್ಣಗೊಂಡಿದ್ದು, ಬಿಡುಗಡೆಯ ಹೊಸ್ತಿಲಿನ ಸಮೀಪವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.