ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿಯಲ್ಲಿ ಬಂಗಾಳಿ ಚಿತ್ರಗಳ ‘ಕೊಲಾಜ್‌’

Last Updated 4 ಏಪ್ರಿಲ್ 2022, 10:03 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊಲಾಜ್‌’ ಸಂಸ್ಥೆಯ ಆಶ್ರಯದಲ್ಲಿ ನಗರದಲ್ಲಿ ಮೊದಲ ಬಾರಿ ಬಂಗಾಳಿ ಚಲನಚಿತ್ರೋತ್ಸವಏ. 8ರಿಂದ 10ರವರೆಗೆ ಕೋರಮಂಗಲದ ಸೇಂಟ್‌ ಜಾನ್ಸ್‌ ಆಡಿಟೋರಿಯಂನಲ್ಲಿ ನಡೆಯಲಿದೆ.

ಈ ಚಿತ್ರೋತ್ಸವದ ಮೂಲಕ ಮತ್ತು ಬೆಂಗಳೂರಿನಲ್ಲಿ ನೆಲೆಸಿರುವ ಬಂಗಾಳಿ-ವಲಸಿಗರಿಗೆ ಬಂಗಾಳಿ ಸಿನಿಮಾದ ರಂಜನೆ ಒದಗಿಸುವ ಪ್ರಯತ್ನ ನಡೆದಿದೆ.

ಈ ಮೂರು ದಿನಗಳ ಸಿನಿಮಾ ಹಬ್ಬದಲ್ಲಿ ಒಟ್ಟು 9 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಸುಭಾಷಿಶ್ ಮುಖರ್ಜಿ ಮತ್ತು ಜಾಯ್‌ ಸೇನ್‌ಗುಪ್ತ ನಟನೆಯ ‘ಶೊಹೊರರ್‌ ಉಪೊಂಕೊಟ’, ಅರ್ಪಣ ಸೇನ್‌ ಅವರ ‘ಬಹೋಮಾನ್‌’ ಹಾಗೂ ಋತುಪರ್ಣ ಸೇನ್‌ಗುಪ್ತಾ ನಟನೆಯ ‘ಬ್ಯೂಟಿಫುಲ್‌ ಲೈಫ್‌’ ಸಿನಿಮಾಗಳು ಪ್ರದರ್ಶನಗೊಳ್ಳಲಿವೆ.

ಇವಲ್ಲದೇ ‘ಬೊಧೋನ್‌’ ಮತ್ತು ‘ಓಕಾಯ್ಗಾರಿ’ ಅಂತಹ 7 ಕಿರು ಚಿತ್ರಗಳು,‘1971’ ಹೆಸರಿನ ಸಾಕ್ಷ್ಯಚಿತ್ರ ಈ ಸಿನಿ ಮಹೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ.

‘ಕೊಲಾಜ್‌’ನ ಸಹ ಸಂಸ್ಥಾಪಕರು ಮತ್ತು ಕಾರ್ಯದರ್ಶಿ ಹಾಗೂ ಫಿಲ್ಮ್‌ ಫೆಸ್ಟಿವಲ್ ನಿರ್ದೇಶಕ ಅಬಿರ್‌ ಬ್ಯಾನರ್ಜಿ ಮಾತನಾಡಿ, ‘ಬಂಗಾಳಿಗರಿಗೆ ಬೆಂಗಳೂರು ಈಗ ಎರಡನೇ ಮನೆಯ ಅಂಗಣವಾಗಿದೆ. ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ 14 ಲಕ್ಷ ಬಂಗಾಳಿಗರು ಇದ್ದಾರೆ. ಸಿನಿಮಾ ಮಾಧ್ಯಮ ಬಂಗಾಳಿಗರ ದೈನಂದಿನ ಜೀವನದ ಒಂದು ಭಾಗ. ಬೆಂಗಳೂರಿನಲ್ಲಿ ಇರುವ ಬಂಗಾಳಿಗರ ಜೀವನಕ್ಕೆ ಹತ್ತಿರವಾದ ಕಥೆಗಳನ್ನು ಒಳಗೊಂಡ ಹಾಗೂ ಬಂಗಾಳಿ ಭಾಷೆಯ ತಾರೆಗಳ ಸಿನಿಮಾಗಳನ್ನು ಈ ಸಿನಿ ಮಹೋತ್ಸವದಲ್ಲಿ ಕಾಣಬಹುದು’ ಎಂದಿದ್ದಾರೆ.

ಈ ಸಿನಿ ಉತ್ಸವದಲ್ಲಿ ಜನಪ್ರಿಯ ನಟರಾದ ಮೂನ್ಮೂನ್‌ ಸೇನ್‌, ಋತುಪರ್ಣ ದಾಸ್‌, ಸ್ವಾಸ್ಥಿಕಾ ಮುಖರ್ಜಿ, ಶ್ರೀಲೇಖಾ ಮಿತ್ರಾ, ರುದ್ರನೈಲ್ ಘೋಶ್, ಜಾಯ್‌ ಸೇನ್‌ಗುಪ್ತಾ, ಸೌರವ್‌ ದಾಸ್‌, ರಿತಬ್ರತಾ ಮುಖರ್ಜಿ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಅತಿಥಿಯಾಗಿ ಪಶ್ಚಿಮ ಬಂಗಾಳದ ಶಾಸಕ ಅಗ್ನಿಮಿತ್ರ ಪಾಲ್ ಕೂಡ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT